‘ಗುರುದೇವ ಮತ್ತು ಮಹಾತ್ಮ’ ರವೀಂದ್ರನಾಥ ಠಾಕೂರ್ ಮತ್ತು ಮಹಾತ್ಮ ಗಾಂಧಿಯವರ ನಡುವಿನ ವಿಚಾರ ವಿನಿಮಯಗಳ ಮೇಲೆ ಬೆಳಕು ಚೆಲ್ಲುವ ಕೃತಿ. ಈ ಕೃತಿಯನ್ನು ಲೇಖಕ ರಾಮನಾಥ ಭಟ್ ಜಿ ಅವರು ರಚಿಸಿದ್ದಾರೆ. ಎರಡು ಮೇರು ವ್ಯಕ್ತಿತ್ವಗಳು ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಮತ್ತು ಭಿನ್ನಾಭಿಪ್ರಾಯದ ಜೊತೆಗೆ ಕಟ್ಟಿಕೊಂಡಿದ್ದ ಸಹಭಾಳ್ವೆಯ ಆದರ್ಶಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ತಮ್ಮಜೇ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡ ಗಾಂಧೀಜಿ ಕಾಂಗ್ರೇಸಿನ ಮೂಲಕ ರಾಜಕೀಯ ಕ್ಷೇತ್ರದಲ್ಲಿ, ಗುರುದೇವ ರವೀಂದ್ರನಾಥರು ತಮ್ಮ ಸ್ಫೂರ್ತಿದಾಯಕ ಕೃತಿಗಳ ಮೂಲಕ ಸಾಂಸ್ಕೃತಿಕಕ ರಂಗದಲ್ಲಿ ನಡೆಸಿದ ಕಾರ್ಯಚಟುವಟಿಕೆಗಳು ಮತ್ತು ಇವರಿಬ್ಬರ ನಡುವಿನ ಸ್ನೇಹ, ಗೌರವ ಜೊತೆಗೆ ಭಿನ್ನಾಭಿಪ್ರಾಯಗಳು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿದಾಯಕವಾದವುಗಳಾಗಿದ್ದವು. ತಮ್ಮ ಅಭಿಪ್ರಾಯಗಳನ್ನು ಕೆಲವೊಮ್ಮೆ ನಿಷ್ಠೂರವೆನಿಸುವಂತಿದ್ದರೂ ಅವರು ಎಚ್ಚರಿಕೆಯಿಂದಲೇ, ಅದೇ ರೀತಿ ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಕುಂದುಂಟಾಗದಂತೆ ವ್ಯಕ್ತಪಡಿಸುತ್ತಿದ್ದರು. ಅವರಲ್ಲಿ ಎಂದಿಗೂ ಸಂಕುಚಿತ ರಾಷ್ಟ್ರೀಯತೆ ಇರಲಿಲ್ಲ. ಅವರು ಭಾರತದ ಅತ್ಯಂತ ಪ್ರಾಚೀನ ಸಂಸ್ಕೃತಿ-ಪರಂಪರೆಯ ಉತ್ತರಾಧಿಕಾರಿಗಳು ಮತ್ತು ಪ್ರತಿನಿಧಿಗಳು ಆಗಿದ್ದರು. ಇವರ ನಡುವಿನ ಗಂಭೀರ ರೀತಿಯ ವಿಚಾರ ವಿನಿಮಯಗಳ ಸಂಕಲನವೇ ಈ ಕೃತಿ.
©2024 Book Brahma Private Limited.