ಅಂಬೇಡ್ಕರ್ ಅವರ ವಿಚಾರಗಳನ್ನು ತುಲನಾತ್ಮಕವಾಗಿ ಕಟ್ಟಿಕೊಡುವ ಕೃತಿ ಎಚ್.ಟಿ.ಪೋತೆ ಅವರ ‘ಅಂಬೇಡ್ಕರ್ ಮತ್ತು…’. ಮಾನವತಾವಾದಿಗಳ ಸಮಾಜದ ಕುರಿತ ಹೋರಾಟ, ಭಾರತ ಕಂಡ ದಾರ್ಶನಿಕರ ನಡೆ ನುಡಿಯ ಜೊತೆಗೆ ಅಂಬೇಡ್ಕರ್ ಅವರ ನಡೆ-ನುಡಿಯ ಸಾಮ್ಯತೆಗಳನ್ನು ಹೋಲಿಕೆ ಮಾಡುತ್ತಾ, ಭಿನ್ನಾಭಿಪ್ರಾಯಗಳನ್ನು ಚರ್ಚಿಸುವತ್ತ ಕೃತಿಯು ಮುಖಮಾಡಿದೆ. ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಅಂಬೇಡ್ಕರ್ ಅವರೂ ಸಾಮಾಜಿಕ ಸಮಾನತೆಯ ಕನಸು ಹೊತ್ತು ಜಾತಿಯ ವ್ಯವಸ್ಥೆಯಿಂದ ಶೋಷಿತರನ್ನು ಮುಕ್ತಗೊಳಿಸಲು ತಮ್ಮ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಮತಾಂತರಗೊಂಡರು. ಅಸ್ಪಶ್ಯರ ವಿಚಾರದ ಹೋರಾಟದಲ್ಲಿ ಅಂಬೇಡ್ಕರ್ ಅವರ ಮುಂದಾಳತ್ವದ ಕುರಿತ ಲೇಖನಗಳು ಇಲ್ಲಿವೆ. ಅಂಬೇಡ್ಕರ್ ಮತ್ತು ಸ್ತ್ರೀವಾದಿ ದೃಷ್ಟಿ, ಅಂಬೇಡ್ಕರ್ ಮತ್ತು ದಲಿತ ಲೋಕ ಅಧ್ಯಾಯಗಳು ಬಾಬಾಸಾಹೇಬರ ವ್ಯಕ್ತಿ– ವೃತ್ತಿ, ಸೈದ್ಧಾಂತಿಕ ಬದುಕು ಮತ್ತು ಮಜಲುಗಳನ್ನು ತೆರೆದಿಟ್ಟಿವೆ. ಹಲವು ಅಧ್ಯಾಯಗಳು ಕಥನ ರೂಪದಲ್ಲಿವೆ. ಅಂಬೇಡ್ಕರ್ ಮತ್ತು ಅವರ ಜೊತೆಗಿನ ವಿವಿಧ ಕಾಲಘಟ್ಟದ ಸಮಕಾಲೀನರ ಬಗೆಗಿನ ಒಳನೋಟ ನೀಡುವ ಕೃತಿ ಇದಾಗಿದೆ.
©2024 Book Brahma Private Limited.