ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಏಂಗಲ್ಸ್ ಅವರು ಜಂಟಿಯಾಗಿ ಬರೆದ ಕೃತಿಯನ್ನು ಲೇಖಕ ವಿ.ಎನ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಜರ್ಮನ್ ತತ್ವಶಾಸ್ತ್ರಜ್ಞ, ಇತಿಹಾಸಕಾರ, ರಾಜಕೀಯ ಶಾಸ್ತ್ರಜ್ಞ, ಪತ್ರಕರ್ತ ಮತ್ತು ಕ್ರಾಂತಿಕಾರಿ ಸಮಾಜವಾದಿ ಫ್ರೆಡೆರಿಕ್ ಏಂಗೆಲ್ಸ್ ಅವರ ಜನ್ಮ ದ್ವಿಶತಮಾನೋತ್ಸವದ ಅಂಗವಾಗಿ ಈ ಕೃತಿ ಪ್ರಕಟಗೊಂಡಿದ್ದು, ಈ ಪುಸ್ತಕವು ಮಾರ್ಕ್ಸ್ ಮತ್ತು ಎಂಗೆಲ್ಸರು 'ಚಾರಿತ್ರಿಕ ಭೌತವಾದ' ಮತ್ತು 'ವೈಜ್ಞಾನಿಕ ಭೌತವಾದ' ಎಂದರೇನೆಂಬುದನ್ನು ಜರ್ಮನ್ ಭಾವನಾವಾದದ ಖಂಡನೆಯ ಮೂಲಕ ಮಂಡಿಸುವ, ಫಾಯರ್ಬಾಖ್ ನ ಜಡಭೌತವಾದವನ್ನು ಟೀಕಿಸಿ ಅದರ ಮಿತಿಗಳನ್ನು ಸ್ಪಷ್ಟವಾಗಿ ವಿವರಿಸುವ ಪುಸ್ತಕ.
©2024 Book Brahma Private Limited.