ಸಂವಿಧಾನ : ನಾಡಿಮಿಡಿತ-ಜನಮಿಡಿತ ಕೃತಿಯು ಸಂವಿಧಾನದ ಐತಿಹಾಸಿಕ ಹಿನ್ನೆಲೆಯಿಂದಿಡಿದು ಸಂವಿಧಾನ ರಚನೆಯ ಮೂಲಕ ಇತ್ತೀಚಿನ ಸಂವಿಧಾನದ ತಿದ್ದುಪಡಿಯವರೆಗಿನ ಪ್ರಮುಖ ಘಟ್ಟಗಳ ಮೇಲೆ ಬೆಳಕು ಚಲ್ಲುತ್ತದೆ. ಭಾರತೀಯರಿಗಾಗಿ ಸಂವಿಧಾನವೊAದನ್ನು ರಚಿಸಬೇಕೆಂಬ ಒತ್ತಡಕ್ಕೆ ಮಣಿದ ಬ್ರಿಟಿಷ್ ಇಂಡಿಯಾ ಸರ್ಕಾರವು ಈ ನಿಟ್ಟಿನಲ್ಲಿ ಸ್ವಾತಂತ್ರö್ಯ ಘೋಷಣೆಗೂ ಹಿಂದಿನಿAದಲೇ ಹಲವಾರು ಪ್ರಯತ್ನಗಳನ್ನು ನಡೆಸಿತು. ಈ ನಿಟ್ಟಿನಲ್ಲಿ ಹಲವು ಆಯೋಗಗಳನ್ನು ನೇಮಿಸಿ, ಸಲಹೆಗಳನ್ನು ನೀಡುವಂತೆ ತಿಳಿಸಿತು. ಈ ಆಯೋಗಗಳ ಕುರಿತು ಸಹ ಈ ಕೃತಿ ವಿವರಗಳನ್ನು ಒದಗಿಸುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯು ಅಸ್ಥಿತ್ವಕ್ಕೆ ಬರುವ ಮೊದಲಿನಿಂದಲೇ ಭಾರತೀಯರಿಗಾಗಿ ರಚಿಸುವ ಸಂವಿಧಾನದ ಕುರಿತು ಬ್ರಿಟಿಷ್ ಸರ್ಕಾರ ನೇಮಿಸಿದ್ದ ಆಯೋಗಗಳನ್ನು ಭೇಟಿ ಮಾಡಿ, ಚರ್ಚಿಸಿ, ಭಾರತೀಯರಿಗೆ ಎಂತಹ ಸಂವಿಧಾನದ ಅವಶ್ಯಕತೆ ಇದೆ ಎಂಬುದನ್ನು ಸಂಬAಧಿಸಿದ ಆಯೋಗಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡಿದರು. ಈ ಎಲ್ಲಾ ಪ್ರಯತ್ನಗಳನ್ನು ಸಂಕ್ಷಿಪ್ತವಾಗಿ ದಾಖಲಿಸುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ. ಸಂವಿಧಾನದ ಐತಿಹಾಸಿಕತೆಯಿಂದ ಹಿಡಿದು ಇತ್ತೀಚಿನ ಸಂವಿಧಾನ ತಿದ್ದುಪಡಿಯವರೆಗೂ ಸಂಪೂರ್ಣವಾದ ಮಾಹಿತಿಯನ್ನು ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಈ ಕೃತಿ ಕಟ್ಟಿಕೊಟ್ಟಿದೆ. ಭಾರತದಲ್ಲಿ ಸಾಂವಿಧಾನಿಕ ಬೆಳವಣಿಗೆ, ಸಂವಿಧಾನದ ಐತಿಹಾಸಿಕ ಹಿನ್ನೆಲೆ, ಸಂವಿಧಾನದ ಪೀಠಿಕೆ, ಸಂವಿಧಾನದ ಸಂಕ್ಷಿಪ್ತ ರೂಪ, ವೈಶಿಷ್ಟö್ಯಗಳು, ಆಶಯಗಳು, ಭಾಗಗಳು, ಪ್ರಮುಖ ಅನುಚ್ಚೇದಗಳು, ತಿದ್ದುಪಡಿ ಪ್ರಕ್ರಿಯೆ ಹಾಗೂ ಪ್ರಮುಖ ತಿದ್ದುಪಡಿಗಳ ಕುರಿತಾದ ಒಳನೋಟವನ್ನು ಈ ಕೃತಿ ಒದಗಿಸುತ್ತದೆ.
©2024 Book Brahma Private Limited.