ಮತಧರ್ಮದ ಕುರಿತು

Author : ಕೆ.ಎಲ್. ಗೋಪಾಲಕೃಷ್ಣ ರಾವ್

₹ 125.00




Published by: ನವಕರ್ನಾಟಕ ಪಬ್ಲಿಕೇಷನ್ಸ್‌
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಕೆ.ಎಲ್ ಗೋಪಾಲಕೃಷ್ಣ ರಾವ್ ಅವರ ಅನುವಾದಿತ ಕೃತಿ ‘ಕಾರ್ಲ್ ಮಾರ್ಕ್ಸ್ ಮತಧರ್ಮದ ಕುರಿತು’ ಕ್ರಿಯಾ-ನವಕರ್ನಾಟಕ ಜಂಟಿ ಯೋಜನೆಯಲ್ಲಿ ಪ್ರಕಟಗೊಂಡಿದೆ ಈ ಕೃತಿಯ ಪರಿವಿಡಿಯಲ್ಲಿ ನಿಸರ್ಗದ ಕುರಿತು ಡೆಮೊಕ್ರೀಟಸ್ ನ ಹಾಗೂ ಎಪಿಕ್ಯೂರಸ್ ನ ತತ್ವಶಾಸ್ತ್ರಗಳ ನಡುವಿನ ವ್ಯತ್ಯಾಸ, ಕ್ಯೋಲ್ನಿಶ್ ತ್ಸೈತುಂಗ್ ಪತ್ರಿಕೆಯ 179ನೇ ಸಂಚಿಕೆಯಲ್ಲಿ ಅಗ್ರಲೇಖಕ, ಕಾನೂನಿನ ಕುರಿತು ಹೆಗೆಲ್ ರ ತತ್ತ್ವಶಾಸ್ತ್ರದ ಪರಾಮರ್ಶೆಗೊಂದು ಕಾಣಿಕೆ, ಪವಿತ್ರ ಕುಟುಂಬ ಅಥವಾ ಬ್ರೂನೊ ಬೌವೆರ್ ಮತ್ತು ಸಂಗಡಿಗರ ವಿರುದ್ಧ ವಿಮರ್ಶಾತ್ಮಕ ಟೀಕೆಯ ಪರಾಮರ್ಶೆ, ಫೋಯರ್ ಬಾಕ್ ರ ಕುರಿತು ಪ್ರಮೇಯಗಳು, ಜರ್ಮನಿಯ ಸೈದ್ಧಾಂತಿಕತೆ ಸೇರಿದಂತೆ 15 ವಿಷಯಗಳಿವೆ.

About the Author

ಕೆ.ಎಲ್. ಗೋಪಾಲಕೃಷ್ಣ ರಾವ್

ಕೆ.ಎಲ್. ಗೋಪಾಲಕೃಷ್ಣರಾವ್ ಅವರು ಮೂಲತಃ ಬೆಂಗಳೂರಿನವರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವ್ಯಾಸಂಗ ಮಾಡಿದ್ದರು. ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ನೀನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಸಹಪಾಠಿಯೂ ಆಗಿದ್ದರು. ಕಲಾವಿದ ಆರ್.ಎಸ್. ನಾಯ್ಡು ಹಾಗೂ ಲೇಖಕ ನಿರಂಜನ ಅವರ ನಿಕಟ ಸಂಪರ್ಕವೂ ಇವರಿಗಿತ್ತು. ರಷ್ಯಾದ ರಾಜಧಾನಿ ಮಾಸ್ಕೊದ ರಾದುಗ ಪ್ರಕಾಶನ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ 17ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಪಂಚದ ಪ್ರಮುಖ ವಿದ್ಯಮಾನಗಳ ಕುರಿತು ವಿಶ್ವದರ್ಶನ ಶೀರ್ಷಿಕೆಯಡಿ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು. 1950ರ ದಶಕದಲ್ಲಿ ಸೋವಿಯತ್ ದೇಶ ಪತ್ರಿಕೆಯಲ್ಲೂ ಕೆಲವು ಕಾಲ ಕರ್ತವ್ಯ ನಿರ್ವಹಿಸಿದ್ದರು. ನವಕರ್ನಾಟಕ ಪ್ರಕಾಶನ ...

READ MORE

Related Books