ಕುಲಕರ್ಣಿ ರಾಮಚಂದ್ರರಾಯರು ಹಾಗೂ ಬುರ್ಲಿ ಬಿಂದುಮಾಧವ ಆಚಾರ್ಯರು ಬರೆದ ಕೃತಿ-ಸಾಮ್ಯವಾದ. ಈ ಸಾಮ್ಯವಾದದಲ್ಲೂ ಕ್ರಾಂತಿಕಾರಕ ವಿಚಾರಗಳಿವೆ. ನಮ್ಮ ನೆಲಕ್ಕೆ ಒಗ್ಗಿಕೊಳ್ಳದಿದ್ದರೂ ಕಾಲಕ್ಕೆ ಆಗುವ ಬದಲಾವಣೆಗೆ ಹೊಂದಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ, ಬಂಡವಲವಾದದ ಹುಟ್ಟು, ಬಂಡವಲವಾದದ ಭೂತಚೇಷ್ಟೆಗಳು, ಬಂಡವಲವಾದದ ದೋಷ ಎಲ್ಲಿದೆ? ಸಾಮ್ಯವಾದದ ಸಿದ್ಧಾಂತ, ಭಾರತೀಯ ಸಾಮ್ಯವಾದ, ಸಾಮ್ಯವಾದದ ಪರಿಣಾಮಗಳು, ಸಾಮ್ಯವಾದದ ಶತ್ರುಗಳು, ಭಾರತವೂ ಸಾಮ್ಯವಾದವೂ ಹೀಗೆ ಒಟ್ಟು 13 ಅಧ್ಯಾಯಗಳಲ್ಲಿ ಸಾಮ್ಯವಾದದ ಸಮಗ್ರ ಚಿತ್ರಣ ನೀಡಲಾಗಿದೆ. ಸಾಮ್ಯವಾದದ ವಿಚಾರಗಳನ್ನೆಲ್ಲ ಕನ್ನಡಿಗರ ಮುಂದಿಡುವುದೇ ಈ ಬರವಣಿಗೆಯ ಉದ್ದೇಶ ಎಂದು ಮುನ್ನುಡಿಯಲ್ಲಿ ಲೇಖಕರು ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.