ಮಾರ್ಕ್ಸ್ ವಾದ ಮತ್ತು ಅನ್ಯವಾದಗಳು ಕೃತಿಯ ರಚಿಸಿರುವ ಲೇಖಕ ಡಾ. ಕೆ. ಕೇಶವ ಶರ್ಮ ಅವರು ಪುನಃ ತೌಲನಿಕ ಅಧ್ಯಯನವಾಗಿ ಚಿಂತನೆ ನಡೆಸಿದ ಕೃತಿಯೇ- ಮಾರ್ಕ್ಸ್ ವಾದಿ ಮೀಮಾಂಸೆ. ಮಾರ್ಕ್ಸ್ ವಾದವು ವಿಶ್ವವ್ಯಾಪಿಯಾಗಿ ಹರಡಲು ಅದರಲ್ಲಿರುವ ಆಂತರಿಕ ಸತ್ವವೇ ಮೂಲ. ವಿಶ್ವದ ಎಲ್ಲ ಕಾರ್ಮಿಕರ ಶಕ್ತಿಯನ್ನು ಒಗ್ಗೂಡಿಸಿ, ಶ್ರಮಿಕರ ಶೋಷಣೆಗೆ ಶಾಶ್ವತ ತಿಲಾಂಜಲಿ ಇಡುವ ತಾಕತ್ತು ಈ ಸಿದ್ಧಾಂತದಲ್ಲಿದೆ ಎಂಬ ಚಿಂತನೆ ಒಳಗೊಂಡಿದೆ. ಮಾರ್ಕ್ಸ್‌ವಾದಿ ಸಿದ್ಧಾಂತದ ಎಲ್ಲ ಆಯಾಮಗಳನ್ನು ಮತ್ತು ಪರಿಣಾಮಗಳನ್ನುಸಮಗ್ರವಾಗಿ ಹಾಗೂ ಆಳವಾಗಿ ಅಧ್ಯಯನ ನಡೆಸಿದ ಕೃತಿ ಇದು.
©2024 Book Brahma Private Limited.