ರಾಮಾಯಣ ಮತ್ತು ಸ್ಕಂದ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ ಎನ್ನಲಾದ ಲಾಡ ದೇಶದ ಪ್ರಾಚೀನ ಸಂಸ್ಕೃತಿ ಮತ್ತು ಅದರ ಐತಿಹಾಸಿಕ ಮಹತ್ವಗಳ ಮೇಲೆ ಈ ಕೃತಿಯೂ ಬೆಳಕು ಚೆಲ್ಲುತ್ತದೆ. 14ನೇ ಶತಮಾನದಲ್ಲಿ ಈ ಜನಸಮುದಾಯ ಸಿಕ್ಕಿಹಾಕಿಕೊಂಡ ರಾಜಕೀಯ ವಿಪ್ಲವ ಮತ್ತು ಆ ಕಾರಣಕ್ಕೆ ತಮ್ಮ ಮೂಲ ಕಾರಣವಾದ ಗುಜರಾತ್ ದಕ್ಷಿಣ ಭಾಗದಿಂದ ಛಿದ್ರಗೊಂಡು ದೇಶಾದ್ಯಂತ ಚದುರಿಹೋಗಿ ಇವತ್ತಿಗೂ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಲಾಡ ಜನಾಂಗದ ಬಗ್ಗೆ ಈ ಕೃತಿಯೂ ವಿವರಗಳನ್ನು ಒದಗಿಸುತ್ತದೆ. ಲೇಖಕ ಜಯಪ್ರಕಾಶ್ ಎನ್.ಡಿ. ಲಾಡ್ ಅವರು ನಡೆಸಿದ ಅಧ್ಯಯನ ಕೃತಿಯಾಗಿದೆ ಇದು.
©2024 Book Brahma Private Limited.