ನಮ್ಮ ದೇಶದಲ್ಲಿ ಕಂಡು ಬರುವ ನೂರಾರು ಜನ ಸಮುದಾಯಗಳು ಜಗತ್ತಿನ ಇತರೆ ಸಮುದಾಯಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿವೆ. ಕಾಡುಗೊಲ್ಲ ಎಂಬ ಈ ಸಮುದಾಯದ ಬಗ್ಗೆ “ ಡಾ.ಎಂ.ಗುರುಲಿಂಗಯ್ಯ / ವಿ.ನಾಗಪ್ಪ” ಉಭಯ ಕವಿಗಳು ಈ ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಅಂಕಿಅಂಶಗಳ ಸಮೇತ ವಿಷಯವನ್ನು ಕ್ರೋಢಿಕರಿಸಿದ್ದ ಕಾರಣ ಅಧ್ಯಯನ ಕಾರರಿಗೆ ವಿವರವಾದ ಮಾಹಿತಿಯನ್ನು ಈ ಕೃತಿಯೂ ನೀಡುತ್ತದೆ. ಈ ಸಮುದಾಯದ ಬಂಧುತ್ವ, ವಿವಾಹ, ಆರಾಧನೆ, ಕಲ್ಪನೆ, ಆರ್ಥಿಕ ಜೀವನ,, ಭಾಷೆ, ಕಲೆ , ಸಾಹಿತ್ಯ , ಆಚರಣೆ ಸಂಗತಿಗಳ ಕುರಿತು ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.