ಜಾನಪದ ಮೌಖಿಕ ಚರಿತ್ರೆಯ ಪ್ರಕಾರ ತಮ್ಮನ್ನು ಮಧ್ಯಮ ಪಾಂಡವನಿಂದ ಮುಂದುವರೆದ ಸಮುದಾಯ ಎಂದು ಹಂಡಿಜೋಗಿ ಸಮುದಾಯವು ಗುರುತಿಸಿಕೊಂಡಿದೆ. ಮಹಾರಷ್ಟ್ರ ಕಡೆಯಿಂದ ಕರ್ನಾಟಕಕ್ಕೆ ಗುಳೆ ಬಂದ ಈ ಸಮುದಾಯವು ಕರ್ನಾಟಕದಲ್ಲಿ ಮರಾಠಿಯೊಂದಿಗೆ ತಮ್ಮ ಸ್ಥಳೀಯ ಭಾಷೆಯನ್ನು ಮಾತನಾಡುತ್ತಾರೆ. ಕಿನ್ನರಿ ಜೋಗಿ, ಡಬ್ಬಾ ಜೋಗಿ, ನರಸಣ್ಣ ಜೋಗಿ ಎಂಬ ಹೆಸರುಗಳಿಂದಲೂ ಗುರುತಿಸಲ್ಪಡುತ್ತಾರೆ . ಕುಂಬಳಕಾಯಿ ಅಥವಾ ಸೋರೆಕಾಯಿಯಿಂದ ಮಾಡಿದ ಹಂಡಿ ಹೆಸರಿನ ತಂಬೂರಿಯನ್ನು ನುಡಿಸುತ್ತಾ, ಹಾಡು ಹಾಡುತ್ತಾ ಭಿಕ್ಷಾಟನೆ ಮಾಡುತ್ತಾ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಲೇಖಕ ಚಂದ್ರಪ್ಪ ಎಂ.ದುಷಂತ್ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.