ಕರ್ನಾಟಕದ ವಿಶಿಷ್ಟ ಅಲೆಮಾರಿ ಸಮುದಾಯಗಳಲ್ಲಿ ಬೈಲಪತ್ತಾರ ಸಮುದಾಯವು ಒಂದು. ತನ್ನದೇ ಸಾಂಸ್ಕೃತಿಕ ಚಹರೆ ಹೊಂದಿರುವ ಈ ಸಮುದಾಯವು ತಾಮ್ರ, ಬೆಳ್ಳಿ, ಕಲ್ಲುಬೆಳ್ಳಿ, ಹಿತ್ತಾಳೆಗಳಿಂದ ಆಭರಣಗಳನ್ನು ತಯಾರಿಸುತ್ತದೆ.
ಜಾತ್ರೆ, ಸಂತೆ, ರೈಲ್ವೆ ನಿಲ್ದಾಣಗಗಳಲ್ಲಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಬದುಕುವುದು ಈ ಸಮುದಾಯದ ಕಸುಬು. ಈ ಕುಶಲಕರ್ಮಿ ಸಮುದಾಯವು ಆಯಾ ಪ್ರದೇಶದ ಪರಿಸರಕ್ಕೆ ತಕ್ಕಂತೆ ಬೈಲು ಪತ್ತಾರ, ಬೈಲು ಅಕ್ಕಸಾಲಿಗರು, ಗಾಡಿ ಸೋನಾರ, ಪರದೇಶಿ ಪೋದಾರ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಬೈಲು ಪತ್ತಾರ ಸಮುದಾಯದ ಚರಿತ್ರೆ, ಜೀವನಕ್ರಮ, ಸಾಮಾಜಿಕ ಸ್ಥಿತ್ಯಂತರಗಳ ಕುರಿತು ಅಧ್ಯಯನ ನಡೆಸಿರುವ ಅದೇ ಸಮುದಾಯದ ವಿಶ್ವನಾಥ ಎಂ. ಬೈಲುಪತ್ತಾರ ಮತ್ತು ಜಗನ್ನಾಥಎಂ. ಬೈಲುಪತ್ತಾರ ಅವರು ಈ ಕೃತಿಯ ಮೂಲಕ ಹಲವು ಮಹತ್ವದ ಸಂಗತಿಗಳನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.