ಗಂಡು ಮಕ್ಕಳು ಬೆತ್ತಲೆ ಮೈಗೆ ಭಾರಿಗಾತ್ರದ ಚಾಟಿಯಿಂದ ಹೊಡೆದುಕೊಂಡರೆ, ಹೆಣ್ಣುಮಕ್ಕಳು ಕಂಕುಳದಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಂಡು ,ಹುರುಮೆ ಭಾರಿಸುತ್ತಾ ಸಾರ್ವಜನಿಕ ನೀಡುವ ಭಿಕ್ಷೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಿಂಧೊಳ್ಳು ಜನಾಂಗ ,ಆಯಾ ಪ್ರಾದೇಶಿಕತೆಗೆ ತಕ್ಕಂತೆ ದುರುಗಮುರುಗಿ, ಚಿಂದಲು, ಸಿಂಧೋರು, ಮಾದಿಗ ಬೋಗಲು ಎಂಬ ವಿವಿಧ ಹೆಸರುಗಳಿಂದ ಗುರುತಿಸಲ್ಪಡುತ್ತಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.