ಬ್ರಿಟಿಷ್ ಸರ್ಕಾರವು 1871ರಲ್ಲಿ ಜಾರಿಗೆ ತಂದ ಅಪರಾಧಿ ಬುಡಕಟ್ಟು ಕಾಯ್ದೆಯಿಂದಾಗಿ ಬಹಳಷ್ಟು ಅಲೆಮಾರಿ ಸಮುದಾಯಗಳು ಸಂಕಷ್ಟಕ್ಕೆ ತುತ್ತಾಗಿದ್ದು, ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದ್ದು ಇತಿಹಾಸದ ವಿಪರ್ಯಾಸವೇ ಸರಿ. ಇಂತಹ ವಿಪರ್ಯಾಸಕ್ಕೆ ತುತ್ತಾದ ಹಲವು ಸಮುದಾಯಗಳಲ್ಲಿ ಗಂಟಿಚೋರ್ ಸಮುದಾಯವೂ ಕೂಡ ಒಂದು. 1952ರಲ್ಲಿ ಈ ಕಳಂಕಿತ ಕಾಯ್ದೆ ರದ್ದಾಯಿತಾದರು ಅದು ಉಳಿಸಿ ಹೋದ ಪಾರಂಪರಿಕ ಅಪರಾಧಿ ಕಳಂಕ ಮಾತ್ರ ಈ ಗಂಟಿಚೋರ್ ಸಮುದಾಯವನ್ನು ಇದುವರೆಗೆ ಬಾಧಿಸುತ್ತಲೇ ಬಂದಿದೆ. ಈ ಸಮುದಾಯವು ಇಂದಿಗೂ ಅವಮಾನದಿಂದಲೇ ಅತಂತ್ರ ಬದುಕು ನಡೆಸುತ್ತಿದೆ. ಈ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಹೀನ ಸ್ಥಿತಿಯನ್ನು, ಪ್ರಸ್ತುತ ಪರಿಸ್ಥಿತಿ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆಯವರು ಅಂಕಿ ಅಂಶಗಳ ಅಧಿಕೃತ ಮಾಹಿತಿಗಳ ಸಮೇತ ಬಿಡಿಬಿಡಿಯಾಗಿ ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ.
©2024 Book Brahma Private Limited.