ತಮ್ಮ ಭಾಷೆ, ಸಂಸ್ಕ್ರತಿ, ಸಂಪ್ರದಾಯ, ಮೂಲ ಪರಂಪರೆ ಒಳ ಪಂಗಡಗಳ ಮೂಲಕ ವಿಶಿಷ್ಟ ಅಲೆಮಾರಿಗಳು ಎಂದು ಗುರುತಿಸಿಕೊಂಡಿರವ ಕೊರಮ ಸಮುದಾಯದ ಬಗ್ಗೆ ಮಲ್ಲಿಕಾರ್ಜುನ ಬಿ. ಮಾನ್ಪಡೆ ಯವರು ಈ ಕೃತಿಯನ್ನು ರಚಿಸಿದ್ದಾರೆ. ಈ ಸಮುದಾಯದ ಮೂಲ ಕಸುಬು ಹಗ್ಗಮಾಡುವುದು, ಈಚಲ ಮರದ ಗರಿಗಳಿಂದ ಕಸಬರಿಕೆ , ಬುಟ್ಟಿ ಚಾಪೆ ತಯಾರಕರಾಗಿದ್ದಾರೆ. ಈ ಸಮುದಾಯದ ಹೆಣ್ಣುಮಕ್ಕಳು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಿ ಭವಿಷ್ಯ ಹೇಳುವುದು, ಹಚ್ಚೆ ಹಾಕುವುದು ಮಾಡುತ್ತಾರೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಲೇಖಕರು ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.