ಅಲೆಮಾರಿ ಸಮುದಾಗಳನ್ನು ಇಂದು ಮೂಲೆ ಗುಂಪು ಮಾಡಲಾಗಿದೆ. ಇಂತಹ ಅನೇಕ ಅಲೆಮಾರಿ ಸಮುದಾಯಗಳಲ್ಲಿ ಸುಡುಗಾಡು ಸಿದ್ದ ಸಮುದಾಯ ಕೂಡ ಒಂದು. ಸ್ವಂತ ಅಸ್ತಿತ್ವ ಹಾಗೂ ಯಾವುದೇ ನಿರ್ದಿಷ್ಟ ನೆಲೆ, ನಿವೇಶನ, ಭೂಮಿಕಾಣಿ, ಊರುಕೇರಿ ಇಲ್ಲದೆ ಅಲೆಯುವ ಈ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಿಂದಾಗಿ ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದಿವೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಎಂ.ಎಸ್.ಗಂಟಿ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.