ವೃತ್ತಿ ಗಾಯನದ ಮೂಲಕ ಈ ಸಮುದಾಯವು ಬದುಕು ಸಾಗಿಸುವ, ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳೆಂದು ಕರೆಯುವ “ದೊಂಬಿದಾಸ” ಸಮುದಾಯದ ಬಗ್ಗೆ ಈ ಕೃತಿಯೂ ಮೂಡಿ ಬಂದಿದೆ. ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ತಮ್ಮ ಹಾಡುಗಾರಿಕೆಯಿಂದ ತಲೆಮಾರುಗಳಿಗೆ ಪಸರಿಸುತ್ತಾ ಬಂದ ಈ ಸಮುದಾಯದ ಇತಿಹಾಸವನ್ನು ಯಾರೂ ತಿಳಿಯದಿರುವುದು ವಿಪರ್ಯಾಸದ ಸಂಗತಿ. ಒಂದು ಚಾರಿತ್ರಿಕ ಮೂಲದ ಪ್ರಕಾರ ಶ್ರೀಕೃಷ್ಣದೇವರಾಯನ ಗೂಢಾಚಾರಿಗಳಾಗಿದ್ದ ಇವರು ಮಾಹಿತಿಗಳನ್ನು ಸಂಗ್ರಹಿಸಲು ಊರಿಂದ ಈ ಊರಿಗೆ ತಿರುಗಾಡುತ್ತಾ ಹಾಡು ಹಾಡಿ ಮಾಹಿತಿ ಕಲೆಹಾಕುತ್ತಿದ್ದರು ಎನ್ನಲಾಗಿದೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಲೇಖಕ ಕುಪ್ಪೆ ನಾಗರಾಜ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.