ರಾಜಗೊಂಡ ಸಮುದಾಯ ಸಸ್ಯಸಂಪತ್ತಿನ ಬಗ್ಗೆ ಆಳವಾದ ಉತ್ತಮ ಜ್ಞಾನವನ್ನು ಹೊಂದಿದವರು. ಜೀವನೋಪಾಯಕ್ಕಾಗಿ ಗಿಡಮೂಲಿಕೆ ಔಷಧ , ಆಯುರ್ವೇದ ಇವರ ಪ್ರಮುಖ ಕಸುಬಾಗಿದೆ. ಈ ಸಮುದಾಯ ಹಿಂದೆ ರಾಜರುಗಳಿಗೆ ವೈಧ್ಯರಾಗಿದ್ದರು, ಆದುದರಿಂದ ಈ ಸಮುದಾಯನ್ನು “ರಾಜಗೊಂಡ” ಸಮುದಾಯ ಎಂದು ಕರೆಯುತ್ತಾರೆ. ಕಾಲಕಳೆದಂತೆ ಹಲವು ಕಾರಣಗಳಿಗೆ ದೇಶದ್ಯಾಂತ ತಮ್ಮ ಜೀವೋನೋಪಾಯಕ್ಕಾಗಿ ವಲಸೆ ಹೋದರು. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಉಭಯ ಲೇಖಕರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.