ಡಾ. ಸಿ. ಓಂಕಾರಪ್ಪ ಅವರ ಕುಮಾರವ್ಯಾಸ ಭಾರತ ಭಾಷಾ ವೈಜ್ಞಾನಿಕ ವಿಶ್ಲೇಷಣೆ ಕೃತಿಯನ್ನು ಬಿ.ಆರ್. ಸತ್ಯನಾರಾಯಣ ಅವರು ಸಂಪಾದಿಸಿದ್ದಾರೆ. ಈ ಕೃತಿಯು ಕುಮಾರವ್ಯಾಸ ಭಾರತದ ಭಾಷೆಯ ಧ್ವನಿಮಾ, ಆಕೃತಿಮಾ, ವಾಕ್ಯರಚನಾ ವಿಧಾನಗಳನ್ನೂ ನಿಘಂಟನ್ನೂ ಪರಿಚಯಿಸುತ್ತದೆ. ಅಲ್ಲದೆ ಕನ್ನಡದ ಬೆಳವಣಿಗೆಯ ಆ ಹಂತದ ಸಾಹಿತ್ಯಕ ಭಾಷೆಯ ಉತ್ತಮ ಚಿತ್ರಣವನ್ನು ಒದಗಿಸುತ್ತದೆ. ವಿಶ್ಲೇಷಣೆ ತತ್ಕಾಲೀನವಾಗಿದೆಯೇ (Synchronic) ಹೊರತು ಐತಿಹಾಸಿಕವಾಗಿಲ್ಲ. ಆದರೂ ಅದು ಒದಗಿಸುವ ಸಾಮಗ್ರಿಯು ಭಾಷೆಯ ಐತಿಹಾಸಿಕ ಅಧ್ಯಯನಕ್ಕೆ ಉಪ ಯುಕ್ತವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಬಗೆಯ ವಿಶೇಷ ಅಧ್ಯಯನಗಳು ಭಾಷೆಯ ಐತಿಹಾಸಿಕ ಮತ್ತು ತೌಲನಿಕ ಅಧ್ಯಯನ ಗಳೆರಡಕ್ಕೂ ಗಟ್ಟಿ ನೆಲೆಯನ್ನೊದಗಿಸುವ ಕಾರಣದಿಂದ ಅವು ಪ್ರೋತ್ಸಾಹ ಯೋಗ್ಯವಾಗುತ್ತದೆ. - ಆಕೃತಿಮಾ ವಿಧಾನವು ತೃಪ್ತಿಕರವಾಗಿ ವರ್ಣಿಸಲಾಗಿದೆ. ಸಂಸ್ಕೃತ ವ್ಯಾಕರಣದ ಮೇಲೆ ವಿಶೇಷ ಅವಲಂಬನೆಯನ್ನು ತೋರಿಸುವ ಸಾಂಪ್ರ ದಾಯಿಕ ವರ್ಗೀಕರಣದ ಅಂಶಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾದ ಮಟ್ಟಿಗೂ ಹೆಣಗಿದ್ದಾರೆ. ಕಾಂಡಸಿದ್ದಿಗೆ ಅಗತ್ಯಕ್ಕಿಂತ ಹೆಚ್ಚಿನ ಭಾಗವು ಒದಗಿಸಲ್ಪಟ್ಟಿದೆ. ಈ ನಿಟ್ಟಿನಲ್ಲಿ ನಾಮಪದ ಮತ್ತು ಕ್ರಿಯಾಪದಗಳ ನಿಷ್ಪತ್ತಿಯು ಒಟ್ಟಿಗೇ ಪರಿಗಣಿಸಲ್ಪಟ್ಟಿದೆ. ಅವುಗಳನ್ನು ಬೇರ್ಪಡಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಭಾಷೆಯ ವಾಕ್ಯರಚನಾ ವಿಧಾನವು ಸಾಕಷ್ಟು ಕೂಲಂಕಷವಾಗಿ ಪರಿಶೀಲಿಸಲ್ಪಟ್ಟಿದೆ. ಇಲ್ಲಿ ಕೊಟ್ಟಿರುವ ಉದಾಹರಣ ಸಂಪತ್ತಿಯು, ಇದನ್ನೊಂದು ಉಪಯುಕ್ತ ಮಾಹಿತಿ ಗ್ರಂಥವನ್ನಾಗಿ ಮಾಡುತ್ತದೆ. ಈ ಕೃತಿಯು ದ್ರಾವಿಡ ಭಾಷಾ ವಿಜ್ಞಾನಕ್ಕೆ ಉಪಯುಕ್ತವೂ ಸ್ಪೋಪಜ್ಞವೂ ಆದ ಕೊಡುಗೆಯಾಗಿದೆ.
©2024 Book Brahma Private Limited.