ಡುಂಗ್ರಿ ಗರಾಸಿಯ ಸಮುದಾಯವು ಮೂಲತ ಗುಜರಾತ್ ಮೂಲದವರು. ಹಳೇ ಮೈಸೂರು ವ್ಯಾಪ್ತಿಯಲ್ಲಿ ಡುಂಗ್ರಿ ಗುರಾಸಿಯ ಎಂತಲೂ, ಬಳ್ಳಾರಿ ಪ್ರದೇಶದಲ್ಲಿ ಗೋಸಂಗಿಗಳು, ಬೆಳಗಾವಿ ವ್ಯಾಪ್ತಿಯಲ್ಲಿ ಗೋಸಾಯಿಗಳು ಎಂದು ಗುರುತಿಸಲ್ಪಡುತ್ತಾರೆ. ಅಲೆಮಾರಿ ಸಮುದಾಯದ ಬಗ್ಗೆ ಸಂಪೂರ್ಣ ಅಧ್ಯಯನದ ಒಳನೋಟವಾಗಿ ಈ ಕೃತಿಯೂ ಮೂಡಿಬಂದಿದೆ. ಈ ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಲೇಖಕ ಜಗದೀಶ ಕೆ.ಕೆ ಅವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.