ಅಲೆಮಾರಿ ಸಮುದಾಯಗಳು ಸಮಕಾಲೀನ ಸಂದರ್ಭದಲ್ಲಿ- ಒತ್ತಡದಲ್ಲಿ ಮೂಲೆ ಗುಂಪಾಗಿವೆ. ಸ್ವಂತ ಅಸ್ತಿತ್ವ ಹಾಗೂ ಯಾವುದೇ ನಿರ್ದಿಷ್ಟ ನೆಲೆ, ನಿವೇಶನ, ಭೂಮಿಕಾಣಿ, ಊರುಕೇರಿ ಇಲ್ಲದೆ ಅಲೆಯುವ ಈ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಿಂದಾಗಿ ಆರ್ಥಿಕವಾಗಿ , ಸಾಮಾಜಿಕವಾಗಿ ಹಿಂದುಳಿದಿವೆ. ಇಂತಹ ಅಲೆಮಾರಿ ಸಮುದಾಯಗಳಲ್ಲಿ ಚೆನ್ನದಾಸರ ಸಮುದಾಯ ಕೂಡ ಒಂದು. ಸಮುದಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಲೇಖಕ ಯರ್ರಪ್ಪ ಡಿ ರವರು ಈ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಕ್ರೀಡೆ, ಕಲೆ ,ಆಚರಣೆಗಳ ಬಗ್ಗೆ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.