ಲೇಖಕ ವಿ. ಪರಮೇಶ್ವರ ಅವರ ’ರಕ್ತದಲ್ಲಿನ ಕೊಬ್ಬುಗಳು’ ಕೃತಿಯು ಆರೋಗ್ಯ ಕುರಿತ ಲೇಖನಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದ ಖ್ಯಾತ ಹೃದಯ ತಜ್ಞ ಡಾ. ಸಿ.ಎನ್.ಮಂಜುನಾಥ್ ‘ಆಧುನಿಕತೆ, ನಗರೀಕರಣ, ಬದಲಾದ ಜೀವನ ಶೈಲಿ, ಹೆಚ್ಚುತ್ತಿರುವ ಒತ್ತಡ, ಪರಿಸರ ಮಾಲಿನ್ಯ, ಧೂಮಪಾನ. ಮಧುಮೇಹ ಇತರೆ ಕಾರಣಗಳಿಂದ ಭಾರತ ದೇಶದಲ್ಲಿ ಹೃದಯಾಘಾತ ಮತ್ತು ಇತರೆ ಸಂಬಂಧಪಟ್ಟ ಕಾಯಿಲೆಗಳು ಗಣನೀಯವಾಗಿ ಹೆಚ್ಚುತ್ತಿದೆ. ಹಲವಾರು ದಶಕಗಳ ಹಿಂದೆ ಈ ಕಾಯಿಲೆಯು ಕೇವಲ ಶ್ರೀಮಂತರ, ನಗರವಾಸಿಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಎಂದು ವ್ಯಾಖ್ಯಾನ ಮಾಡಲಾಗುತ್ತಿತ್ತು. ಆದರೆ ಈಗ ಹೃದಯ ಸಂಬಂಧಿ ಕಾಯಿಲೆಯು ಹಳ್ಳಿಗಾಡಿನ ಜನರಲ್ಲಿ , ಕೂಲಿ ಕಾರ್ಮಿಕರಲ್ಲಿ ಕೂಡಾ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ನುರಿತ ಹಾಗೂ ಹಿರಿಯ ಹೃದ್ರೋಗ ತಜ್ಞರಾದ ವಿ. ಪರಮೇಶ್ವರ ಅವರು ”ರಕ್ತದಲ್ಲಿನ ಕೊಬ್ಬುಗಳು” ಕುರಿತು ಸಂಕ್ಷಿಪ್ತವಾಗಿ ಸಾಮಾನ್ಯ ಜನರಿಗೆ ಅರ್ಥವಾಗುವ ದಾಟಿಯಲ್ಲಿ ಈ ಹೊತ್ತಿಗೆಯನ್ನು ಪ್ರಕಟಿಸಿದ್ದಾರೆ. ರಕ್ತದಲ್ಲಿಯ ಕೊಬ್ಬಿನಾಂಶವನ್ನು ಯಾವ ರೀತಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಆಹಾರ ಪದ್ಧತಿ ಯಾವ ರೀತಿ ಇರಬೇಕು ಮತ್ತು ಕೊಬ್ಬಿನಾಂಶ ಕಡಿಮೆ ಮಾಡುವ ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂಬ ಅಂಶವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಇದೊಂದು ಉತ್ತಮ ಪ್ರಯತ್ನವಾಗಿದೆ ’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.