ಖ್ಯಾತ ವೈದ್ಯ ಡಾ. ಪಿ.ಎಸ್. ಶಂಕರ ಅವರ ಕೃತಿ-ಫಂಗಸ್ ರೋಗಗಳು. ವೈರಸ್, ಬ್ಯಾಕ್ಟೇರಿಯಾ ಹಾಗೂ ಫಂಗಸ್ ಹೀಗೆ ಶರೀರವನ್ನು ಕಾಡುವ ರೋಗಗಳ ಹುಟ್ಟಿಗೆ ಮೂಲ ಕಾರಣಗಳು ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಸಹ ವಿಶಿಷ್ಟ ಲಕ್ಷಣಗಳಿರುವ ರೋಗಗಳನ್ನು ಹುಟ್ಟಹಾಕುತ್ತವೆ. ಫಂಗಸ್ ಗಳು ಎಂದರೇನು? ಅವುಗಳ ಸ್ವರೂಪವೇನು? ಅವು ಹೆಚ್ಚಾಗಿ ಹುಟ್ಟುವುದು ಎಲ್ಲಿ? ಅದಕ್ಕೆ ಕಾರಣಗಳೇನು? ಈ ರೋಗಗಳು ಬಾರದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳೇನು? ಫಂಗಸ್ ರೋಗಗಳ ಕುರಿತು ವಿಶ್ವದೆಲ್ಲಡೆ ನಡೆದ ಹಾಗೂ ನಡೆಯುತ್ತಿರುವ ಅಧ್ಯಯನಗಳ ವಿಫುಲ ಮಾಹಿತಿ ಇವು ಈ ಕೃತಿಯ ವಿಶೇಷತೆಗಳಾಗಿದೆ. ಸಾಮಾನ್ಯ ಓದುಗರಿಗೆ ತಿಳಿಯುವಂತೆ ವೈದ್ಯಕೀಯ ಶಾಸ್ತ್ರದ ವಿವರಗಳನ್ನು ನೀಡಿದ್ದು, ಲೇಖಕರ ವಿದ್ವತ್ತಿನ ಆಳ-ವಿಸ್ತಾರಗಳ ಸೂಚಕವಾಗಿದೆ.
©2025 Book Brahma Private Limited.