ಸಹಜ ಜೈವಿಕ ಕ್ರಿಯೆ ಋತುಚಕ್ರ ಆರೋಗ್ಯ ಬರಹದ ಪುಸ್ತಕವನ್ನು ಲೇಖಕಿ ಸಿ. ಅನ್ನಪೂರ್ಣಮ್ಮ ರಚಿಸಿದ್ದಾರೆ. ಈ ಪುಸ್ತಕದಲ್ಲಿ ನಮ್ಮಲ್ಲಿ ರೋಗದಿಂದ ನರಳುವವರಿಗಿಂತ ರೋಗವಿದೆ ಎನ್ನುವ ಭ್ರಮೆಯಿಂದ ನರಳುವವರೇ ಹೆಚ್ಚು. ಈ ಮಾತು ‘ಮಾಸಿಕ ಮುಟ್ಟಿ’ನ ವಿಚಾರದಲ್ಲಿ ಹೆಚ್ಚು ಅನ್ವಯವಾಗುತ್ತದೆ. ಋತುಕ್ರಿಯೆಯು ಸ್ತ್ರೀ ಶರೀರದ ಸಹಜ ಜೈವಿಕ ಕ್ರಿಯೆ. ಇದರ ಬಗ್ಗೆ ಇರುವ ಅಜ್ಞಾನ, ತಪ್ಪು ಕಲ್ಪನೆ ಅಗಾಧ. ಋತುಚಕ್ರದ ಬಗೆಗೆ ಕುತೂಹಲ, ತಪ್ಪು ಗ್ರಹಿಕೆಗಳು ಸಹಜವಾದರೂ ಇದನ್ನು ತನ್ನ ‘ಮುಟ್ಟಿನ ಬಗೆಗೆ ಇರುವ ಮೂಢನಂಬಿಕೆಯಿಂದ ತತ್ತರಿಸುತ್ತಿರುವವರ ತಳಮಳ, ಅಜ್ಞಾನ, ಭಯ ಇವುಗಳನ್ನು ಹೊಡೆದೋಡಿಸಿ ಅವರಿಗೆ ವೈಜ್ಞಾನಿಕ ಅರಿವನ್ನು ಮೂಡಿಸುವ ದಿಶೆಯಲ್ಲಿ ಈ ಪುಸ್ತಕ ಒಂದು ಪ್ರಾಮಾಣಿಕ ಪ್ರಯತ್ನ, ಗಹನವಾದ ವಿಚಾರಗಳನ್ನು ಇಲ್ಲಿ ಸರಳೀಕರಿಸಿ ವಿಶದಪಡಿಸಲು ಪ್ರಯತ್ನಿಸಲಾಗಿದೆ. ಈ ದಿಶೆಯಲ್ಲಿ ಈ ಕೃತಿಯು ವೈದ್ಯರಿಗೂ, ದಾದಿಯರಿಗೂ ಮತ್ತು ನಮ್ಮ ಸಮಾಜದ ಸೋದರಿಯರಿಗೂ ಮಾರ್ಗದರ್ಶಿಯಾಗಬಲ್ಲದೆಂಬ ನಂಬಿಕೆ ನಮ್ಮದು ಎಂದು ಪುಸ್ತಕದ ಕರಿತಾಗಿ ವಿವರಿಸಲಾಗಿದೆ.
©2024 Book Brahma Private Limited.