ಲೇಖಕ ಡಾ. ಬಿಮಲ್ ಛಾಜರ್ ಅವರು ರಚಿಸಿದ ಕೃತಿ-ಹೃದಯ ರೋಗ: ಹಿಮ್ಮೆಟ್ಟಿಸಲು ಐದು ಸುಲಭ ಸೋಪಾನಗಳು. ಬದಲಾಗುತ್ತಿರುವ ಜೀವನ ಶೈಲಿಯ ಪರಿಣಾಮ ವಯಸ್ಕರು, ವೃದ್ಧರು ಎನ್ನದೇ ಮಕ್ಕಳು ಹೃದಯ ಸಂಬಂಧಿ ವಿಭಿನ್ನ ರೋಗಗಳಿಂದ ನರಳುತ್ತಿದ್ದಾರೆ. ಇದಕ್ಕೆ ಕೇವಲ ದೈಹಿಕ ಕಾರಣ ಮಾತ್ರವಲ್ಲ; ಮಾನಸಿಕ ಕಾರಣವೂ ಇದೆ. ಮಕ್ಕಳಿಗೂ ಸಕ್ಕರೆ ಕಾಯಿಲೆ ಬರುತ್ತಿದೆ. ಇದರ ಪರಿಣಾಮ ಹೃದಯ ಸಂಬಂಧಿ ರೋಗಗಳು ಹೆಚ್ಚುತ್ತಿವೆ. ಇವುಗಳ ತಡೆಗೆ ಮುಂಜಾಗ್ರತೆ ಎಂಬಂತೆ; ಲೇಖಕ ವೈದ್ಯರು ಐದು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಹೃದಯ ಸಂಬಂಧಿ ರೋಗಗಳು ಏಕಾಏಕಿಯಾಗಿ ಕಾಣಿಸಿಕೊಳ್ಳುತ್ತವೆ. ವೈದ್ಯರಲ್ಲಿಗೆ ಹೋಗುವ ಮುನ್ನವೇ ರೋಗಿ ಸಾಯುವುದೂ ಉಂಟು. ಹೀಗಾಗಿ, ಹೃದಯ ಸಂಬಂಧಿ ರೋಗಗಳಿಗೆ ತತ್ ಕ್ಷಣದ ಚಿಕಿತ್ಸೆ ಅಗತ್ಯ. ಆಸ್ಪತ್ರೆಗೆ ತಲುಪುವ ಮುನ್ನ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳು ಇತ್ಯಾದಿ ಮಾಹಿತಿಗಳನ್ನು ಒಳಗೊಂಡ ಕೃತಿ ಇದು. ಕೃತಿಯ ಮಾಹಿತಿಯು ರೋಗಿಯಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿದೆ. ಅಂಜಿಯೋಪ್ಲಾಸ್ಟಿ, ಬೈಪಾಸ್ ಸರ್ಜರಿಗಳ ಬಗ್ಗೆ ರೋಗಿಗೆ ತನ್ನ ರೋಗಗಳ ಕುರಿತು ಸಂಪೂರ್ಣ ಶಿಕ್ಷಿತನನ್ನಾಗಿ ಮಾಡುತ್ತದೆ.
©2024 Book Brahma Private Limited.