ಪಚನ ವ್ಯವಸ್ಥೆಯ ವ್ಯಾಧಿಗಳು- ಈ ಕೃತಿಯನ್ನು ರಚಿಸಿದವರು ಡಾ. ಸಿ.ಜಿ. ಕೇಶವಮೂರ್ತಿ. ಬಹುತೇಕ ಎಲ್ಲ ರೋಗಗಳಿಗೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯೇ ಕಾರಣ. ನಾವು ಊಟ ಮಾಡಿದ ಅನ್ನದ ಜೀರ್ಣ ಕ್ರಿಯೆಯು ಸುಲಭ ಹಾಗೂ ಸರಳವಾಗಿ ಆಗುತ್ತಿದ್ದರೆ ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಇಲ್ಲದಿದ್ದರೆ, ಜೀರ್ಣ ಪ್ರಕ್ರಿಯೆಯಲ್ಲಿ ತೊಂದರೆ ಇದ್ದು, ಮುಂದೆ ಅದೇ ಅಡೆ ತಡೆಯು ರೋಗದಲ್ಲಿ ಪರಿವರ್ತನೆ ಹೊಂದಿ, ಹತ್ತು ಹಲವಾರು ಅಡ್ಡಿ-ಬೇನೆಗಳನ್ನು ತಂದೊಡ್ಡುತ್ತದೆ. ಹೀಗಾಗಿ, ದೇಹದ ಹಲವಾರು ರೋಗಗಳಿಗೆ ನಮ್ಮ ಜಿರ್ಣಾಂಗ ಕ್ರಿಯೆಯು ಮೂಲ ಕಾರಣವಾಗಿರುತ್ತದೆ. ಈ ಕುರಿತು ವಿವರವಾಗಿ ಮಾಹಿತಿ ನೀಡುವ ಕೃತಿ ಇದು.
©2024 Book Brahma Private Limited.