ರಕ್ತದ ಏರೊತ್ತಡ ನಿಯಂತ್ರಿಸಲು 201 ಸಲಹೆಗಳು ಎಂಬುದು ಡಾ. ಬಿಮಲ್ ಛಾಜರ್ ಅವರು ರಚಿಸಿದ ಕೃತಿ. ರಕ್ತದೊತ್ತಡವು ಹೆಚ್ಚಾಗಿ ಬದಲಾದ ಜೀವನ ಶೈಲಿಯ ಪರಿಣಾಮ. ಅದು ದೈಹಿಕ ಕಾರಣಗಳಿಗಿಂತ ಮನಸ್ಸಿನ ತಳಮಳ, ಭೀತಿ, ಆತಂಕಗಳೇ ರಕ್ತದೊತ್ತಡಕ್ಕೆ ಮೂಲವಾಗುತ್ತದೆ. ಇಂದು ವಯೋಮಿತಿಯ ಪರಿಧಿ ಮೀರಿಯೂ ರಕ್ತದೊತ್ತಡದ ಲಕ್ಷಣಗಳಿಂದ ವ್ಯಕ್ತಿಗಳು ಬಳಲುತ್ತಿದ್ದಾರೆ. ದೇಹಕ್ಕೆ ಸೂಕ್ತವಾಗುವ ಆಹಾರ ಪದ್ಧತಿ, ಬದುಕಿನ ಒತ್ತಡಗಳನ್ನು ನಿರ್ವಹಿಸುವ ಕಲೆಗಾರಿಕೆ, ಸಹನೆಯ ಮಹತ್ವ ಇತ್ಯಾದಿ ಅರಿವು ಹೊಂದುವ ಮೂಲಕ ರಕ್ತದೊತ್ತಡವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು. ಇಂತಹ ಒಟ್ಟು 201 ಸಲಹೆಗಳಿರುವ ಉಪಯುಕ್ತ ಕೃತಿ ಇದು.
©2025 Book Brahma Private Limited.