ಲೇಖಕ ಡಾ.ವಿ. ಲಕ್ಷ್ಮಿನಾರಾಯಣ್ ಹಾಗೂ ಡಾ.ಸೂರಜ್ ತೇಜಸ್ವಿ ಅವರು ಜಂಟಿಯಾಗಿ ಬರೆದ ಕೃತಿ-ಮಧುಮೇಹ: ಭಾರತದ ಅಗೋಚರ ಶತ್ರು. ಮಧುಮೇಹದಿಂದ ಆಗುವ ಹತ್ತು ತೊಡಕುಗಳು ಹಾಗೂ ಅವುಗಳ ನಿವಾರಣೆ ಉಪಾಯಗಳ ವಿಸ್ತೃತ ವಿವರಣೆಯ ಕೃತಿ ಇದು. ಇಂದು ಭಾರತದಲ್ಲಿ ಮಧುಮೇಹ ರೋಗಿಗಳು ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಆಧುನಿಕ ಜೀವನ ಶೈಲಿಯು ಇದಕ್ಕೆ ಕಾರಣ. ಉಂಡ ಊಟವನ್ನೂ ಸಹ ಕರಗಿಸಲಾರದಷ್ಟು ಕಸರತ್ತು ಇಲ್ಲದ ಇಂದಿನ ಬದುಕು ಮಧುಮೇಹ ರೋಗಕ್ಕೆ ಆಹ್ವಾನ ನೀಡುತ್ತದೆ. ಮೈ ಮುರಿದು ದುಡಿಯುವ ಮನಸ್ಸು ಇಲ್ಲವಾಗಿದೆ. ಬೊಜ್ಜು ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆಯೂ ಹೆಚ್ಚುತ್ತಿದೆ. ನಾರಿನ ಅಂಶ ಇರುವ ತಿನಿಸುಗಳನ್ನು ಇಚ್ಛೆಪಡುತ್ತಿಲ್ಲ. ಅಲ್ಲದೇ, ಮಾನಸಿಕ ಒತ್ತಡದ ತೀವ್ರತೆಯೂ ಹೆಚ್ಚುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಮಧುಮೇಹ ಹೆಚ್ಚುತ್ತಿದೆ. ಇವುಗಳ ನಿವಾರಣೆಗೆ ಅಗತ್ಯವಿರುವ ಕ್ರಮಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ.
©2025 Book Brahma Private Limited.