ಕೃಷಿ ಆಧಾರಿತ ದೇಶ ಭಾರತ. ಕೃಷಿಯನ್ನೇ ನಂಬಿ ಬದುಕು ನಡೆಸುವ ಕುಟುಂಬದವರ ಪಾಡು ಕೇಳುವರಿಲ್ಲ ಎನ್ನುವಂತಾಗಿದೆ. ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ಸುಮಾರು ಒಂದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಕಾರಣ ಏನು, ಸಮಗ್ರ ಕೃಷಿ ನೀತಿ ಎಂದರೇನು ಎಂಬುದರ ಕುರಿತು ಚರ್ಚೆ ಈ ಕೃತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಪ್ರಕ್ರಿಯೆಯ ಒಂದು ವಿಶ್ಲೇಷಣೆ, ಜನಸಾಮಾನ್ಯರ ಆತ್ಮಹತ್ಯೆ - ಅಂಕಿ ಅಂಶಗಳು ತಿಳಿಸುವುದೇನು?, ರೈತರ ಆತ್ಮಹತ್ಯೆ- ಒಂದು ವಿಶೇಷ ಪರಿಗಣನೆ, ರೈತರ ಆತ್ಮಹತ್ಯೆ - ಅಂಕಿ ಅಂಶಗಳ ಮೇಲೆ ಒಂದು ಕ್ಷಕಿರಣ, ಆತ್ಮಹತ್ಯೆಯು ಒಂದು ಸರಿಪಡಿಸಬಹುದಾದ ಮನೋವೈಜ್ಮಾನಿಕ ಸಮಸ್ಯೆ, ಆತ್ಮಹತ್ಯೆ ತಡೆಯ ಸಾಮಾಜಿಕ, ಸಾಮೂಹಿಕ ಪ್ರಯತ್ನಗಳು, ಆತ್ಮಹತ್ಯೆ ಪ್ರರಕರಣಗಳನ್ನು ವರದಿ ಮಾಡಬೇಕಾದರೆ ಮಾಧ್ಯಮದವರು ವಹಿಸಬೇಕಾದ ಎಚ್ಚರಿಕೆಗಳು, ಆತ್ಯಹತ್ಯೆ ಸಂತ್ರಸ್ತ ನಿರ್ಗತಿಕ ಕುಟುಂಬಗಳಿಗೆ ಪರಿಹಾರ ಮತ್ತು ಮರುನೆಲೆ, ಕೃಷಿಕರ ಆತ್ಮಹತ್ಯೆಗಳು ಕೃಷಿ ವ್ಯವಸ್ಥೆಯ ದುರ್ಬಲ ಆರ್ಥಿಕತೆಗೆ ಹಿಡಿದ ಕನ್ನಡಿಯೇ? ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ಈ ಕೃತಿಯಲ್ಲಿದೆ.
©2025 Book Brahma Private Limited.