ಲೇಖಕ ಎ.ಪಿ. ಚಂದ್ರಶೇಖರ ಅವರ ಕೃತಿ-ಅನ್ನದಾತನ ಆತ್ಮಹತ್ಯೆ. ದೇಶದ ಅವೈಜ್ಞಾನಿಕ ಕೃಷಿ ನೀತಿಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತಾವು ಕೃಷಿಯ ಮೇಲೆ ಹೂಡಿದ ಬಂಡವಾಳಕ್ಕಿಂತಲೂ ಕಡಿಮೆ ಆದಾಯ ಬರುತ್ತಿದ್ದು, ವರ್ಷವರ್ಷವೂ ಇಂತಹ ಹಾನಿ ಅನುಭವಿಸುತ್ತಲೇ ಬರುತ್ತಿದ್ದಾರೆ. ಸಾಲಕ್ಕೆ ಕೈಚಾಚಿ ಕೊನೆಗೆ ಬೆಟ್ಟದಷ್ಟು ಸಾಲ ಮಾಡಿಕೊಂಡು ತೀರಿಸಲಾಗದೇ, ಇತ್ತ ಕೃಷಿ ಬೆಳೆಗಳೂ ಕೈಗೆ ಎಟುಕದೇ, ವೈಜ್ಞಾನಿಕ ಬೆಲೆ ಸಿಗದೇ ಕಂಗೆಟ್ಟು ಹೋಗುತ್ತಿದ್ದಾರೆ. ಈ ಸನ್ನಿವೇಶವನ್ನು ಸೃಷ್ಟಿಸಿದವರು ಯಾರು? ಇದಕ್ಕೆ ರೈತರು ಬಲಿಯಾಗುತ್ತಿದ್ದು, ರೈತರ ಆದಾಯವನ್ನು ಯಾರು ನುಂಗಿ ಹಾಕುತ್ತಿದ್ದಾರೆ. ದಲ್ಲಾಲಿಗಳೇ, ಬಂಡವಾಳಶಾಹಿಗಳೇ? ದೇಹಕ್ಕೆ ಅಗತ್ಯವಿರುವ ಅನ್ನವನ್ನು ಶ್ರಮದಿಂದಲೇ ಪಡೆಯಬೇಕೆ ಹೊರತು ಬುದ್ದಿಯ ಬಲದಿಂದ ಕಸಿಯುವುದಲ್ಲ ಎಂಬುದು ಗಾಂಧೀಜಿ ಅವರ ಮಾತು. ಇದನ್ನು ಸಮರ್ಥಿಸಿಕೊಳ್ಳುತ್ತಾ ಲೇಖಕರು, ಇವತ್ತಿನ ಸಂದರ್ಭವನ್ನು ವಿಶ್ಲೇಷಿಸಿ, ಬುದ್ದಿ ಬಲದಿಂದ ರೈತರ ಶ್ರಮವನ್ನು ಶೋಷಿಸಲಾಗುತ್ತಿದೆ. ಆದರೆ, ದೇಶದ ಆರ್ಥಿಕ ವ್ಯವಸ್ಥೆ ಏರುಪೇರಾದರೂ ರೈತರನ್ನೇ ಸೋಮಾರಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ವಿಷಾದಿಸುತ್ತಾರೆ. ಇಂತಹ ವಸ್ತು ಸ್ಥಿತಿಯ ವಿಶ್ಲೇಷಣೆ ಒಳಗೊಂಡಿರುವ ಕೃತಿ ಇದು.
©2024 Book Brahma Private Limited.