ಬರಗಾಲ ಎಲ್ಲ ಪ್ರದೇಶಗಳ ಜನರ ಬದುಕನ್ನು ಹೈರಾಣಗೊಳಿಸುವಂತದ್ದು. ಈ ಕುರಿತು ಲೇಖಕ ಎ.ಎಸ್. ಕುಮಾರಸ್ವಾಮಿ ವಿಶ್ಲೇಷಿಸಿ ಬರೆದ ಕೃತಿಯೇ ’ಬಾರದಿರಲಿ ಬರಗಾಲ’. ಲೇಖಕರು ಪ್ರಾಸ್ತಾವಿಕ ಮಾತುಗಳಲ್ಲಿ ’ ಕರ್ನಾಟಕದ ರೈತರು ಆಗಾಗ್ಗೆ ಬರುವ ಬರಗಾಲಗಳಿಗೆ ಹೊಂದಿಕೊಂಡಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಎದುರಿಸಿದ ಸಂಕಷ್ಟದ ಪರಿಸ್ಥಿತಿಯು ಕೃಷಿ ವ್ಯವಸ್ಥೆಯನ್ನು ದುರ್ಗತಿಗೆ ಈಡು ಮಾಡಿದೆ. ಕೃಷಿ ಸಂಪನ್ಮೂಲಗಳು ನಶಿಸುತ್ತಿವೆ. ಮಣ್ಣಿನ ಉತ್ಪಾದಕತೆ ಕಡಿಮೆಯಾಗುತ್ತಿದೆ. ರೈತರ ಬಳಿ ಬೀಜ ಸಂಗ್ರಹಗಳೂ ಖಾಲಿಯಾಗಿವೆ. ಅಂತರ್ಜಲವು ಎಲ್ಲ ನಿರೀಕ್ಷೆಗಳನ್ನೂ ಮೀರಿ ಬತ್ತುತ್ತಿದೆ. ಗ್ರಾಮೀಣ ಯುವಕರು ಕೃಷಿಯಿಂದ ವಿಮುಖರಾಗಿ ನಗರಗಳೆಡೆಗೆ ಮುಖ ಮಾಡುತ್ತಿದ್ದಾರೆ. ರಾಜ್ಯದ ಒಂದೆಡೆ ಬರಗಾಲ, ಇನ್ನೊಂದು ಕಡೆ ನೆರೆ. ಇವು ತಂದೊಡ್ಡುವ ಸಮಸ್ಯೆ ಪರಿಹಾರ ಹಾಗೂ ಜರ್ಜರಿತ ಕೃಷಿ ವ್ಯವಸ್ಥೆಯ ಪುನರುಜ್ಜೀವನ ಆಗಬೇಕಿದೆ’ ಎಂದಿದ್ದಾರೆ. ಹೀಗಾಗಿ, ಈ ಕೃತಿಯು ಚಿಂತನೆಯನ್ಗೆನು ಪ್ರೇರೇಪಿಸುತ್ತದೆ.
©2024 Book Brahma Private Limited.