ಹಲವಾರು ಹೆಸರುಳ್ಳ ಆಭರಣಗಳು ನಮ್ಮ ಸುತ್ತ ಮುತ್ತ ಇವೆ.ಅವುಗಳ ಕಲೆ ಹಾಕುವ ಮತ್ತು ಅವುಗಳ ಹಿನ್ನಲೆಯನ್ನು ತಿಳಿದು ಕೊಳ್ಳುವ ಕುತೂಹಲ ಲೇಖಕಿ ಶ್ರೀಮತಿ ಶಾಂತಿ ನಾಯಕರವರಿಗೆ ಇದ್ದುದರಿಂದ ಅದರ ಮಾಹಿತಿ ಜೊತೆಗೆ ಕೆಲವು ಆಭರಣಗಳ ಚಿತ್ರಗಳನ್ನು ತಮ್ಮ ಮಗಳಾದ ಡಾ.ಸವಿತಾ ಉದಯರವರು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದ ಅಧ್ಯಯನದ ಮಹಾ ಪ್ರಬಂಧಕ್ಕಾಗಿ ಪಡೆದ ಕೆಲವು ಆಭರಣ, ರೇಖಾಚಿತ್ರ, ಛಾಯಾಚಿತ್ರಗಳನ್ನು ತಮ್ಮ ಪುಸ್ತಕದಲ್ಲಿ ಬಳಸಿಕೊಂಡಿರುವರು.ನಮ್ಮಂತಹ ಅನೇಕ ಉತ್ಸಾಹಿಗಳಿಗೆ, ಬರಹಗಾರರಿಗೆ ಇದೊಂದು ಅಪರೂಪದ ಪುಸ್ತಕವೆಂದರೆ ತಪ್ಪಾಗಲಾರದು.ಪ್ರತಿ ಆಭರಣದ ಹಿಂದಿನ ಮಹತ್ವದ ಕುರಿತು ಸಾಮಾನ್ಯ ಜ್ಞಾನ ಹೊಂದಿದರೆ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯ.
©2025 Book Brahma Private Limited.