ಜನಪದ ಗಣಿತ

Author : ಶಾಂತಿ ನಾಯಕ

Pages 32

₹ 10.00




Year of Publication: 2009
Published by: ಕರ್ನಾಟಕ ಜಾನಪದ ಪರಿಷತ್ತು
Address: ಜಲದರ್ಶಿನಿ ಲೇಔಟ್, ಎಂ.ಎಸ್. ರಾಮಯ್ಯ ಆಸ್ಪತ್ರೆ ಮಹದ್ವಾರದ ಹತ್ತಿರ, ನ್ಯೂ ಬಿಇಎಲ್‌ ರಸ್ತೆ, ಬೆಂಗಳೂರು

Synopsys

ಮೌಖಿಕ ಪರಂಪರೆಯ ಜನಪದರು ಶಾಲೆಗಳಿಗೆ ಹೋಗಿ ಲೆಕ್ಕ- ಲೆಕ್ಕಾಚಾರ ಕಲಿತವರಲ್ಲ. ಸಂದರ್ಭಾನುಸಾರ ಬುದ್ಧಿ ಬಳಸಿ, ನೆನಪಿನ ಶಕ್ತಿಯಿಂದ, ವ್ಯವಹಾರಕ್ಕೆ ತಕ್ಕಷ್ಟು ಗಣಿತ ಜ್ಞಾನವನ್ನು ಸಂಪಾದಿಸಿಕೊಳ್ಳುತ್ತಾರೆ. ಅವರ ನೆನಪಿನ ಕೋಶದಲ್ಲಿ ಅಸಂಖ್ಯಾತ ಗಣಿತ ವಿಷಯಗಳಿವೆ. ಪ್ರಸ್ತುತ ಕೃತಿಯಲ್ಲಿ ಜನಪದದ ಗಣಿತ ಚಮತ್ಕಾರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

About the Author

ಶಾಂತಿ ನಾಯಕ
(27 March 1943)

ಲೇಖಕಿ ಶಾಂತಿ ನಾಯಕ ಅವರು ಎಂ.ಎ., ಬಿ.ಇಡಿ ಪದವೀಧರರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾಗಿ ನಿವೃತ್ತರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಿ 27-03-1943ರಲ್ಲಿ ಜನಿಸಿದರು. ತಂದೆ  ನಾರಾಯಣ ವೆಂಕಣ್ಣ ಕಲಗುಜ್ಞೆ,ತಾಯಿ- ದೇವಮ್ಮ ನಾರಾಯಣ ಕಲಗುಜ್ಜಿ. ಕೃತಿಗಳು : ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು-(1979), ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಕಥೆಗಳು-(1982), ಜಾಣೆ ಕನ್ನಡವ ತಿಳಿದ್ದೇಳೆ -(1982), ಕಾಕಕ್ಕ ಗುಬ್ಬಕ್ಕ-(1985), ಜನಪದ ವೈದ್ಯಕೀಯ ಅಡುಗೆಗಳು-(1986), ರಂಗೋಲಿ-(1994),  ಕುಡಿತ ನಿಮಗೆಷ್ಟು ಹಿತ -(1995),  ಸಿಂಕೋನಾ-(1998), ಹವ್ಯಕರ ಅಡುಗೆಗಳು-(2003),  ಜನಪದ ಆಹಾರ ಪಾನೀಯಗಳು-(2004)., (ಸ್ಮರಣ ಸಂಚಿಕೆ) ಚಿನ್ನದ ಚೆನ್ನ -(2001), ಆಸರ -(2012),  ಸಜ್ಜನ -2003, ಉತ್ತರ ಕನ್ನಡ ಜಿಲ್ಲೆಯ ಸಣ್ಣಕತೆಗಳು (ಸಂ), ಜೀವ ಉಳಿಸುವ ...

READ MORE

Related Books