ಪ್ರಸ್ತುತ ಶಾಂತಿ ನಾಯಕ ಅವರು 'ನಮ್ಮ ಹತ್ತು ಅಪೂರ್ವ ಗಿಡಮರ ಬಳ್ಳಿಗಳು' ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಕವಿವಿ ಪ್ರಸಾರಾಂಗದಿಂದ ಪ್ರಕಟಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ, ಲೇಖಕರು ಕೃತಿಯಲ್ಲಿ ಔಷಧಿಯ ಗುಣವುಳ್ಳ ಅಂಬೆಕೊಂಬು, ಅರಿಶಿನ, ತಂಡ್ಬಳ್ಳಿ, ದಾಗಡಿ, ಹಿಂಡ್ಲೆಕಾಯಿ, ನೆಲತಾಳೆ, ಮಾಲೆಬಂದಿ, ರಾವ್ ಗೆಂಡೆ, ಹಕ್ಕರಿಕೆ, ಹುರುಡೆ ಹೀಗೆ ಹತ್ತು ಸಸ್ಯಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದ್ದಾರೆ. ಇವನ್ನು ಓದುತ್ತಾ ಹೊದಂತೆ ಈ ಹೆಸರುಗಳು ನಮಗೆ ಗೊತ್ತಿವೆ ಎನಿಸಿದರೂ ಅವುಗಳ ಉಪಯೋಗ ಮತ್ತು ಮಹತ್ವವನ್ನು ತಿಳಿದು ಅಚ್ಚರಿ ಎನಿಸುತ್ತದೆ. ಔಷಧೋಪಯೋಗಗಳಲ್ಲದೆ ಸಾಂಸ್ಕೃತಿಕ ಉಪಯೋಗಗಳನ್ನು ಕೂಡ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ. ಸಸ್ಯ ಸಂಬಂಧಿ ಪೌರಾಣಿಕ ಮತ್ತು ಕಾಲ್ಪನಿಕ ಕಥೆಗಳ ಜೊತೆಗೆ ಓದುಗರಿಗೆ ಅನುಕೂಲವಾಗಲೆಂದು ಪ್ರತಿ ಸಸ್ಯದ ಛಾಯಾ ಚಿತ್ರವನ್ನು ಓದಗಿಸಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇಂತಹ ಮಹತ್ವದ ಸಸ್ಯಗಳ ಬಗ್ಗೆ ಮಾಹಿತಿ ಪಡೆದ ಓದುಗರು ಇವುಗಳನ್ನು ನೆಟ್ಟು ಬೆಳೆಸಿ, ಕಾಪಾಡುವ ಮನಸ್ಥಿತಿಗೆ ತಲುಪುತ್ತಾರೆಂಬುದರಲ್ಲಿ ಸಂಶಯವಿಲ್ಲ. ಇಂತಹ ಕೃತಿಯನ್ನು ನೀಡಿದ ಶ್ರೀಮತಿ ಶಾಂತಿ ನಾಯಕ ಅವರನ್ನು ಅಭಿನಂದಿಸುವೆ. ಓದುಗರು ಇದರ ಪ್ರಯೋಜನ ಪಡೆಯಲೆಂದು ಶುಭ ಹಾರೈಸುವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಕುಲಪತಿಗಳ ನುಡಿಯಲ್ಲಿ ಬರೆದಿದ್ದಾರೆ.
©2024 Book Brahma Private Limited.