ಕರ್ನಾಟಕದ ಮೈಸೂರನ್ನು ಆಳಿದ ಪ್ರಮುಖ ದೊರೆಗಳಲ್ಲಿ ಟಿಪ್ಪು ಸುಲ್ತಾನ್ ಕೂಡ ಒಬ್ಬರು. ಬ್ರಿಟೀಷರ ವಿರುದ್ಧ ಹೋರಾಡಿ ಹಲವು ಬಾರಿ ಅವರನ್ನು ತನ್ನ ಸಂಸ್ಥಾನದ ಹೊರಗಟ್ಟಿದ ಧೀರ ಯೋಧ. ಇಂತಹ ಓರ್ವ ವ್ಯಕ್ತಿಯ ಕುರಿತು ವಿಶ್ವ ಮಾನ್ಯರು ಸರಣಿಯಲ್ಲಿ ಬಂದಂತಹ ಪುಸ್ತಕ ಟೀಪು ಸುಲ್ತಾನ. ಲೇಖಕರಾದ ಎಂ ಅಬ್ದುಲ್ ರೆಹಮಾನ್ ಪಾಷ ಈ ಪುಸ್ತಕದಲಲ್ಇ ಟಿಪ್ಪುವಿನ ವೀರಗಾಥೆಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಪರಮತ ಸಹಿಷ್ಣು. ಅನೇಕ ಹಿಂದು ದೇವಾಲಯಗಳಿಗೆ ಉದಾರ ದತ್ತಿದಾನಗಳನ್ನು ನೀಡಿದ್ದ. ಆಡಳಿತದಲ್ಲಿ ನಿಷ್ಠುರನಾಗಿದ್ದ ಟೀಪೂ ತಪ್ಪು ಯಾರೇ ಮಾಡಿದ್ದರೂ ಶಿಕ್ಷಿಸುತ್ತಿದ್ದ. ‘ನರಿಯಂತೆ ನೂರು ವರ್ಷ ಬದುಕುವುದಕ್ಕಿಂತ ಹುಲಿಯಂತೆ ಒಂದು ದಿನ ಬದುಕುವುದು ಮೇಲು‘ ಎಂದು ಸಾರಿ ಬ್ರಿಟಿಷರ ಮೋಸದ ಯುದ್ಧದಲ್ಲಿ ವೀರ ಸೈನಿಕನಾಗಿ ಹೋರಾಡಿ ಮಡಿದ. ಕತ್ತಿವರಸೆಯಲ್ಲಿ ಅಜೇಯನಾಗಿದ್ದ ಟೀಪು ಬಂದೂಕಿಗೆ ಸುಲಭವಾಗಿ ಬಲಿಯಾದ ಟಿಪ್ಪುವಿನ ಕುರಿತಾದ ಸಕಲ ಮಾಹಿತಿಗಳು ಈ ಪುಸ್ತಕದಲ್ಲಿ ಲಭ್ಯ. ಸರಳ ಕನ್ನಡದಲ್ಲಿ ಎಲ್ಲಾ ರೀತಿಯ ಓದುಗರು ಸುಲಭದಲ್ಲಿ ಅರ್ಥೈಸಿಕೊಳ್ಳುವಂತಹ ಭಾಷೆಯ ಉಪಯೋಗವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.
©2024 Book Brahma Private Limited.