ಜವಾಹರಲಾಲ್ ನೆಹರೂ (1889-1964) ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ. ಭಾರತೀಯ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಲ್ಲಿ ಅಗ್ರಗಣ್ಯರಾಗಿದ್ದ ನೆಹರೂ, ಗಾಂಧೀಜಿಯವರ ನೆಚ್ಚಿನ ಬಂಟನಾಗಿದ್ದ ಕಾರಣ, 1941ರಷ್ಟು ಹಿಂದೆಯೇ ಭವಿಷ್ಯ ಭಾರತದ ಚುಕ್ಕಾಣಿ ಅವರಿಗೆ ದೊರೆಯಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನೆಹರೂ ಪ್ರಧಾನಮಂತ್ರಿಯಾದರು. ಈ ಪಯಣದ ಯಶೋಗಾಥೆಯನ್ನು ವಿವರಿಸುವ ಪುಸ್ತಕವಿದು. ತಮ್ಮ ಮರಣದವರೆಗೆ(1964) ಪ್ರಧಾನಿ ಪಟ್ಟದಲ್ಲಿಯೇ ಉಳಿದರು. ರಾಜ ಪ್ರಭುತ್ವಕ್ಕೆ ಒಗ್ಗಿಹೋಗಿದ್ದ ಭಾರತವನ್ನು ಕ್ರಮೇಣ ಪ್ರಜಾಪ್ರಭುತ್ವದ ಕಡೆಗೆ ಕರೆದೊಯ್ಯುವ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಕಂದಾಚಾರದಲ್ಲಿ ಮುಳುಗಿದ್ದ ಭಾರತೀಯ ಸಮಾಜಕ್ಕೆ ಆಧುನಿಕತೆ ಹಾಗೂ ವೈಜ್ಞಾನಿಕತೆಯ ಸ್ಪರ್ಶವನ್ನು ನೀಡಿದರು. ‘ವೈಜ್ಞಾನಿಕ ಮನೋಭಾವ‘ವನ್ನು ಹುಟ್ಟುಹಾಕಿದರು. ಮಕ್ಕಳ ‘ಚಾಚಾ ನೆಹರೂ‘ಇಂಗ್ಲಿಷಿನಲ್ಲಿ ‘ದ ಡಿಸ್ಕವರಿ ಆಫ್ ಇಂಡಿಯ‘, ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ‘, ‘ಟುವರ್ಡ್ ಫ್ರೀಡಮ್‘ ಮುಂತಾದ ಕೃತಿಗಳಿಂದ ಪ್ರಸಿದ್ಧರು. 1995ರಲ್ಲಿ ನೆಹರೂ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆಯಿತು. ಲೇಖಕ ಎಂ. ಅಬ್ದುಲ್ ರೆಹಮಾನ್ ಪಾಷಾರವರು ನೆಹರೂರವರನ್ನು ಈ ಪುಸ್ತಕದಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
©2025 Book Brahma Private Limited.