ಆರ್ಯ ಸಮಾಜ ಸಂಸ್ಥಾಪಕ ಎಂದೇ ಖ್ಯಾತಿಯ ದಯಾನಂದ ಸರಸ್ವತಿ ಅವರ ಬದುಕು, ಸಾಹಿತ್ಯ ಮತ್ತು ಸಾಮಾಜಿಕ ಸಾಧನೆಗಳ ಒಟ್ಟು ಚಿತ್ರಣವನ್ನು ಲೇಖಕಿ ನೇಮಿಚಂದ್ರ ಅವರು ನೀಡಿರುವ ಕೃತಿ ಇದು. ಸಾಹಿತಿ ನಾ. ಸೋಮೇಶ್ವರ ಅವರು ಸಂಪಾದಕರು. ಭಾರತೀಯ ಸಂಸ್ಖೃತಿಯ ಪರಿಪಾಲನೆಯಲ್ಲಿ ಆರ್ಯ ಸಮಾಜದ ಪರಂಪರೆಯು ಸನಾತನ. ಇದನ್ನು ಉಳಿಸಿಕೊಂಡು ಹೋಗಬೇಕು ಎಂದು ಹೇಳುತ್ತಲೇ, ಭಾರತೀಯ ಸಮಾಜದಲ್ಲಿದ್ದ ‘ಸತಿ ಸಹಗಮನ’ದಂತಹ ಅಮಾನವೀಯ ಆಚರಣೆಗಳನ್ನು ತೊಡೆದು ಹಾಕಲು ಯತ್ನಿಸಿದರು. ಜನರಲ್ಲಿ ಜಾಗೃತಿ ಮೂಡಿಸಿ, ಮಹಿಳೆಯರ ಘನತೆ-ಗೌರವ-ಸ್ವಾಭಿಮಾನವನ್ನು ಬಡಿದೆಬ್ಬಿಸಲು ಹೊಸ ಚಳವಳಿಯನ್ನೇ ಹುಟ್ಟು ಹಾಕಿದರು. ಭಾರತೀಯ ಸಮಾಜ ಸುಧಾರಕ ಪೈಕಿ ದಯಾನಂದ ಸರಸ್ವತಿ ಅವರದ್ದು ಬಹು ದೊಡ್ಡ ಹೆಸರು.
©2025 Book Brahma Private Limited.