ಕನ್ನಡ ಕುಲಸಾರಥಿ ಖ್ಯಾತಿಯ ಎ.ಆರ್. ಕೃಷ್ಣಶಾಸ್ತ್ರಿ ಅವರು ಬದುಕು-ಬರಹ ಕುರಿತು ಲೇಖಕ ಟಿ.ಎಸ್. ಗೋಪಾಲ ಅವರು ಬರೆದ ಕೃತಿ ಇದು. ಎ.ಆರ್. ಕೃಷ್ಣಶಾಸ್ತ್ರಿ ಅವರು ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೃತಿಗಳ ಕೊಡುಗೆ ನೀಡಿದ್ದು, ವಚನ ಭಾರತ ಕೃತಿಯ ಮೂಲಕ ಮಹಾಭಾರತದ ಕಥೆಯನ್ನು ತೀರಾ ಸರಳವಾಗಿ ನೀಡಿದ ಖ್ಯಾತಿ ಇವರದ್ದು. ಕನ್ನಡ ಸಾಹಿತ್ಯ ಪರಿಷತ್ತು ಪತ್ರಿಕೆ ಹಾಘೂ ನಿಘಂಟು ಸಂಪಾದಕರಾಗಿದ್ದರು. ಹರಿಶ್ಚಂದ್ರಕಾವ್ಯ ಸಂಗ್ರಹ, ವಚನ ಭಾರತ, ನಾಗಮಹಾಶಯ (ಅನುವಾದ), ನಿಬಂಧಮಾಲಾ (ಅನುವಾದ), ಭಾಷಣಗಳು ಮತ್ತು ಲೇಖನಗಳು (ಬಿಡಿವಿಚಾರಗಳು), ಬಂಕಿಮಚಂದ್ರ, ಶ್ರೀ ರಾಮಕೃಷ್ಣ ಪರಮಹಂಸರ ಜೀವನಚರಿತ್ರೆ, ಕನ್ನಡ ಕೈಪಿಡಿ (ಭಾಗ-೧), ನಯಸೇನನ ಧರ್ಮಾಮೃತ ಇತ್ಯಾದಿ ಕೃತಿಗಳನ್ನು ನೀಡಿದ ಅವರ ಬದುಕನ್ನು ಚಿತ್ರಿಸಿದ ಕೃತಿ ಇದು.ಸಾಹಿತಿ ಡಾ. ನಾ. ಸೋಮೇಶ್ವರ ಅವರು ಕೃತಿಯನ್ನು ಸಂಪಾದಿಸಿದ್ದಾರೆ.
©2025 Book Brahma Private Limited.