ಸ್ತ್ರೀಯರಿಗೆ ಓದು-ಬರಹ ಅನಗತ್ಯ. ಕಥೆ, ಕಾದಂಬರಿ ಓದುವುದು ಅಪರಾಧ. ಮೈ ನೆರೆಯುವ ಮೊದಲೇ ಮದುವೆಯಾಗಬೇಕು, ಗಂಡ ಸತ್ತರೂ ಆಕೆ ವಿಧವಾ ಜೀವನ ನಡೆಸಬೇಕು, ಮರು ಮದುವೆಯ ಅಗತ್ಯವಿಲ್ಲ ಎನ್ನುವ ಪುರುಷಪ್ರಧಾನ ಸಮಾಜದ ಧೋರಣೆಯನ್ನು ಖಂಡಿಸಿದವರಲ್ಲಿ ಕೊಡಗಿನ ಗೌರಮ್ಮ ಪ್ರಮುಖರು. ಬದುಕಿದ ಕೇವಲ 27 ವರ್ಷಗಳಾದರು ಅವರು ಬರೆದ 21 ಕಥೆಗಳು ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳಿಗೆ ಮತ್ತು ಸಾಹಿತ್ಯ ಲೋಕದಲ್ಲಿ ಸ್ತ್ರೀ ಬರಹಗಳಿಗೆ ನಾಂದಿ ಹಾಡಿದವು. ಲೇಖಕಿ-ಚಿಂತಕಿ-ಬರಹಗಾರ್ತಿ ಕೊಡಗಿನ ಗೌರಮ್ಮ ಅವರ ಸಂಪೂರ್ಣ ಬದುಕು-ಬರಹದ ಚಿತ್ರಣ ಇಲ್ಲಿ ಸಿಗುತ್ತದೆ.
©2025 Book Brahma Private Limited.