ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಅವರ ಕೃತಿ ಬೆಂಜಮಿನ್ ಫ್ರಾಂಕ್ಲಿನ್ . ಇವರು ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು, ವಿಜ್ಞಾನಿಯು, ರಾಜ್ಯನೀತಿಶಾಸ್ತ್ರಜ್ಞರು, ಸಂಶೋಧಕರು, ಮುದ್ರಕರು ಮತ್ತು ರಾಯಭಾರಿಯೂ ಆಗಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ ನಲ್ಲಿ ಜನಿಸಿದ ಇವರು, ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು, ಲೇಖನ ಬರೆಯುವವರೆಗೂ ಎಲ್ಲ ಕೆಲಸಗಳನ್ನು ಮಾಡಿದರು. ವಿಜ್ಞಾನ ಕ್ಷೇತ್ರದಲ್ಲಿ ವಿದ್ಯುಚ್ಛಕ್ತಿ ಸಂಬಂಧಿಸಿದ ಸಂಶೋಧನೆಗೆ ಮತ್ತು ಭೌತಶಾಸ್ತ್ರದ ಇತಿಹಾಸದ ಕೆಲಸಗಳಿಗೆ ಹೆಸರುವಾಸಿ. ಇಂತಹವರ ಜೀವನ ಸಾಧನೆ ಕುರಿತು ಲೇಖಕಿಯರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.