ಆಧುನಿಕ ವೈದ್ಯ ವಿಜ್ಞಾನದ ಪಿತಾಮಹ ‘ಹಿಪ್ಪೋಕ್ರೇಟ್ಸ್‘ ಹುಟ್ಟುವುದಕ್ಕೆ ಸುಮಾರು 150 ವರ್ಷಗಳ ಹಿಂದೆ ಹುಟ್ಟಿರಬಹುದಾದ ಸುಶ್ರುತ, ಅದುವರೆಗಿನ ಭಾರತೀಯ ಶಸ್ತ್ರವೈದ್ಯ ವಿಜ್ಞಾನದ ಅರಿವನ್ನೆಲ್ಲ ಒಂದೆಡೆ ಸಂಗ್ರಹಿಸಿ ‘ಸುಶ್ರುತ ಸಂಹಿತೆ‘ ಎನ್ನುವ ಗ್ರಂಥವನ್ನು ಭಾರತೀಯ ಪರಂಪರೆಗೆ ನೀಡಿ ಮಹದುಪಕಾರವನ್ನು ಮಾಡಿದವರು. ಈ ಗ್ರಂಥವು ಆಧುನಿಕ ವೈದ್ಯಕೀಯದ ಮೇಲೆ, ಮುಖ್ಯವಾದ ಶಸ್ತ್ರವಿಜ್ಞಾನದ ಮೇಲೆ ಅಪಾರ ಪ್ರಭಾವ ಬೀರಿದೆ. ಇಂದು ‘ಸುರೂಪಿಕಾ ಶಸ್ತ್ರಚಿಕಿತ್ಸೆ‘ಯನ್ನು ಸುಶ್ರುತನು ಹೇಗೆ ವರ್ಣಿಸಿರುವನೋ, ಹೆಚ್ಚು ಕಡಿಮೆ ಹಾಗೆಯೇ ಇಂದೂ ನಾವು ಮಾಡುತ್ತಿದ್ದೇವೆ. ಸುಶ್ರುತ ವಿವರಿಸಿದ 20 ಹರಿತ ಹಾಗೂ 101 ಹರಿತವಲ್ಲದ ಶಸ್ತ್ರಚಿಕಿತ್ಸಾ ಉಪಕರಣಗಳಲ್ಲಿ ಬಹುಪಾಲು ಉಪಕರಣಗಳನ್ನು ಹೆಚ್ಚಿನ ಬದಲಾವಣೆಯಿಲ್ಲದೇ ಹಾಗೆಯೇ ಉಪಯೋಗಿಸುತ್ತಿದ್ದೇವೆ. ಇಂತಹ ಸುಶ್ರುತ ಸಂಹಿತೆಯನ್ನು ಕೊಡುಗೆಯಾಗಿ ನೀಡಿದ ಸುಶ್ರುತರ ವ್ಯಕ್ತಿತ್ವ-ಜೀವನ ಪದ್ಧತಿ- ಸಂಶೋಧನೆ- ಕೊಡುಗೆಗಳನ್ನು ರಸವತ್ತಾಗಿ, ಸವಿವರವಾಗಿ ತಿಳಿಸುವ ಕೃತಿ ಇದಾಗಿದೆ.
©2024 Book Brahma Private Limited.