ಲೇಖಕಿ ಎಸ್. ಮಾಲತಿ ಅವರು ಬರೆದ ಕೃತಿ-ಬದ್ಧತೆಯ ಕಲಾವಿದ ಬಲರಾಜ ಸಾಹನಿ. ರಂಗಭೂಮಿಯ ಅನುಭವ ಇರುವ ಹಾಗೂ ರಂಗ ಸಮಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಿದ ಲೇಖಕಿ ಅವರು ಕಲಾವಿದ ಬಲರಾಜ ಸಾಹನಿ ಅವರನ್ನು ಸಹಜವಾಗೇ ಸುಂದರವಾಗಿ ಓದುಗರನ್ನು ಪರಿಚಯಿಸಿದ್ದಾರೆ. ಕಲಾವಿದನೊಬ್ಬ ಕಲೆಯನ್ನೇ ಬದುಕಿನ ಜೀವಾಳವನ್ನಾಗಿಸಿಕೊಳ್ಳುವ ಪರಿಯನ್ನು ವಿವರಿಸಿರುವ ಲೇಖಕಿ, ಕಲಾವಿದ ಬಲರಾಜ್ ಸಾಹನಿ ಅವರ ಕೆಲ ಖಾಸಗಿ ಹಾಗೂ ಸಾರ್ವಜನಿಕ ಮುಖವನ್ನೂ ಸಹ ಅನಾವರಣಗೊಳಿಸಿದ್ದಾರೆ. ಈ ಎರಡೂ ಮುಖಗಳು ಕಲೆಯ ವಿಸ್ತಾರಕ್ಕೆ ಹೇಗೆ ಪೂರಕವಾಗಿವೆ ಎಂಬುದನ್ನೂ ಚರ್ಚಿಸಿದ್ದಾರೆ.
©2025 Book Brahma Private Limited.