ಪಂಡಿತ ತಾರಾನಾಥ ಅವರು ಕೇವಲ ಆಯುರ್ವೇದ ವೈದ್ಯರಾಗಿರಲಿಲ್ಲ. ಅವರು ಸಂಗೀತ, ಸಾಹಿತ್ಯ, ಕಲೆ, ರಂಗಭೂಮಿ, ಪತ್ರಿಕೋದ್ಯಮ ಹೀಗೆ ಅನೇಕ ವಿಷಯಗಳಲ್ಲಿ ಪರಿಣಿತಿ ಪಡೆದಿದ್ದರು. ಅಪ್ರತಿಮ ದೇಶಭಕ್ತ. ಕನ್ನಡ ಪ್ರೇಮಿ. ದಲಿತೋದ್ಧಾರಕ. ಹಿಂದು-ಮುಸ್ಲಿಮ್ ಐಕ್ಯತೆಗೆ ಒತ್ತು ಕೊಟ್ಟ - ಕನ್ನಡ, ಹಿಂದಿ ಮತ್ತು ಇಂಗ್ಲಿಷಿನಲ್ಲಿ ಅದ್ಭುತವಾಗಿ ಮಾತನಾಡಬಲ್ಲ ಅವರ ಬಗೆಗಿನ ಕುತೂಹಲ ಸಂಗತಿ ಮತ್ತು ಜೀವನ ಮೌಲ್ಯಗಳ ಕುರಿತು ಅವರ ನಿಲುವುಗಳನ್ನು ಇಲ್ಲಿ ಲೇಖಕಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
©2024 Book Brahma Private Limited.