ಮೋಪಾಸನ ಓಲೆಗಳು

Author : ಪಿ. ವೆಂಕೋಬಾಚಾರ್ಯ

Pages 112

₹ 2.00




Year of Publication: 1953
Published by: ಆನಂದ ಗ್ರಂಥಮಾಲೆ
Address: ಗವಳಿಗಲ್ಲಿ, ಹುಬ್ಬಳ್ಳಿ.

Synopsys

ಪಿ. ವೆಂಕೋಬಾಚಾರ್ಯರು ಬರೆದ ಕೃತಿ-ಮೋಪಾಸನ ಓಲೆಗಳು. ಕನ್ನಡ ಸಾಹಿತ್ಯದಲ್ಲಿ ಪತ್ರಸಾಹಿತ್ಯಕ್ಕೂ ವಿಶಿಷ್ಟ ಸ್ತಾನವಿದೆ. ಜವಾಹರಲಾಲ್ ನೆಹರೂ ಅವರ ‘ಮಗಳಿಗೆ ತಂದೆಯ ಓಲೆಗಳು, ಸಿದ್ಧವನಹಳ್ಳಿ ಕೃಷ್ಣಶರ್ಮರ ಜಗತ್ ಕಥಾವಲ್ಲರಿ-ಈ ಕೃತಿಗಳ ಸಾಲಿಗೆ ಸೇರುವಂತಹದ್ದು-ಮೋಪಾಸನ ಓಲೆಗಳು. ಫ್ರೆಂಚ್ ದೇಶದ ಗಾಯ್ ದಿ. ಮೋಪಾಸನ ಜೀವನದಲ್ಲಿ ಈ ಪತ್ರಗಳು ವಹಿಸಿದ ಪಾತ್ರಗಳು ಹಾಗೂ ಈ ಮೂಲಕ ಆತನ ಜೀವನದ ಸ್ವರೂಪವನ್ನು ಕಟ್ಟಿಕೊಡುವ ಕೃತಿ ಇದು.

About the Author

ಪಿ. ವೆಂಕೋಬಾಚಾರ್ಯ

ಪಿ. ವೆಂಕೋಬಾಚಾರ್ಯರು ಜನಿಸಿದ್ದು 1905ರಲ್ಲಿ. ಅಜ್ಮೀರ್ ಜನರಲ್ ಅಸ್ಯೂರೆನ್ಸ್ ಸೊಸೈಟಿಯ ಹುಬ್ಬಳ್ಳಿಯ ಶಾಖೆಯ ಪ್ರಧಾನ ವ್ಯವಸ್ಥಾಪಕರಾಗಿದ್ದರು. ವಿಧಿ ತಂದ ವಧು (1946), ಕುಲವಿಲ್ಲದ ಹೆಣ್ಣು(1948) ಹಾಗೂ ವೃಂದ (1949) ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಫ್ರೆಂಚ್ ಕಥಾ ಸಾಹಿತ್ಯ ಸಾಮ್ರಾಟ ಎಂದೇ ಖ್ಯಾತಿಯ ಗಾಯ್ ದ ಮೋಪಾಸನ ಕಥೆಗಳನ್ನು ಅರ್ಪಣ, ಸೈಮನ್ನನ ತಂದೆ, ಗಾಯದ ನೋವು ಹೀಗೆ ವಿವಿಧ ಹೆಸರುಗಳಲ್ಲಿ ಪ್ರಕಟವಾಗಿವೆ. ಇವೆತ್-ಈತನ ಕಾದಂಬರಿ. ಹೂವು ಅರಳಿತು-ತೆಲುಗು ಕಥೆಗಳ ಸಂಕಲನ. ತೆಲುಗು ಹಾಸ್ಯ ಕತೆಗಾರ ಮುನಿ ಮಾಣಿಕ್ಯಂ ನರಸಿಂಹರಾಯರ ಕೃತಿಗಳು ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರ ರುಕ್ಮಿಣಿ ಮತ್ತು ...

READ MORE

Related Books