‘ಪತ್ರವ್ಯವಹಾರ ಮತ್ತು ನಾನು’ ಕೃತಿಯು ಶಿವರಾಮ ಕಾರಂತರ ಕೃತಿಯಾಗಿದ್ದು, ಮಾಲಿನಿ ಮಲ್ಯ ಅವರ ಸಹಾಯದಲ್ಲಿ ಪ್ರಕಟಣೆಗೊಂಡಿದೆ. ಈ ಕೃತಿಯ ಸಮೀಕ್ಷೆ ಮಾಡಿರುವ ಎಸ್. ಗೋಪಾಲ್ ಅವರು, ಕಾರಂತರ ಪತ್ರ ವ್ಯವಹಾರ ಪ್ರಪಂಚದ ಅಗಾಧವ್ಯಾಪ್ತಿಯ ಒಂದು ಸ್ಥೂಲ ಕಲ್ಪನೆ ಈ ಪತ್ರಗಳಿಂದ ಒದಗುವುದು ಸಾಧ್ಯ. ಕೌಟುಂಬಿಕ ನೆಲೆಯ ಪತ್ರಗಳೂ ಇಲ್ಲಿವೆ. ಮನುಷ್ಯ ಸಹಜವಾದ ಸಿಟ್ಟು, ಸೆಡುವು ಇತ್ಯಾದಿ ವ್ಯಕ್ತಗೊಳಿಸುವ ಪತ್ರಗಳನ್ನು ಇಲ್ಲಿ ಕೈಬಿಡಲಾಗಿಲ್ಲ. ಕಾರಂತರು ತಮ್ಮ ಮನಸ್ಸಿಗೆ ತೋರಿದ್ದನ್ನು ತಮಗೆ ಸರಿ ಎಂದು ಕಂಡುದನ್ನು ಆ ಕ್ಷಣ ಹೇಳಿಬಿಡುತ್ತಿದ್ದರು; ಅಥವಾ ಬರೆಯುತ್ತಿದ್ದರು. ಅವರ ಶೀಘ್ರ ಸ್ಪಂದನ ಸ್ವಭಾವವನ್ನು ಇಲ್ಲಿನ ಅನೇಕ ಪತ್ರಗಳಲ್ಲಿ ಗುರುತಿಸಬಹುದು. ಹಲವಾರು ವಿಚಾರಗಳಲ್ಲಿ ಕಾರಂತರ ನಿಖರವಾದ, ನೇರವಾದ, ಸಂಕ್ಷಿಪ್ತವಾದ ಅಭಿಪ್ರಾಯಗಳು ಇಲ್ಲಿನ ಪತ್ರಗಳಲ್ಲಿ ದಾಖಲಾಗಿವೆ. ಸಾಮಾನ್ಯವೆನಿಸುವ ವಿಷಯಗಳಿಗೂ ಅವರು ಒಡನೆಯೇ ಸ್ಪಂದಿಸುತ್ತಿದ್ದ ರೀತಿಯನ್ನು ಮುಂದಿಡುವ ಸಲುವಾಗಿ ಅವರ ಅನೇಕ ಪತ್ರಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ’ ಎಂದಿದ್ದಾರೆ.
©2024 Book Brahma Private Limited.