ಲೇಖಕಿ ಮೇಘನಾ ಸುಧೀಂದ್ರ ಅವರ ಕೃತಿ-ಲಿಪಿಯ ಪತ್ರಗಳು. ಮನಸ್ಸು-ಮಸ್ತಕ-ಮಾತುಕತೆ -ಪುಸ್ತಕದ ಉಪಶೀರ್ಷಿಕೆಯಾಗಿದೆ. ಪತ್ರ ರೂಪದಲ್ಲಿಯ ಕೃತಿ. ಸ್ವತಃ ಲೇಖಕಿಯು ಹೇಳುವಂತೆ ‘ಈ ಪುಸ್ತಕದ ಐಡಿಯಾ ಹೊಳೆದ್ದದ್ದು ನನ್ನ ಮನೆಯಲ್ಲಿ ಸಿಕ್ಕ ತಾತನ ಪತ್ರಗಳನ್ನ ನೋಡಿ. ಆಮೇಲೆ ಮದುವೆಯಾದ ಮೇಲೆ ನನ್ನ ಮನಸ್ಸಿನಲ್ಲಿ ಆಗುತ್ತಿದ್ದ ದ್ವಂದ್ವವನ್ನೆಲ್ಲಾ ನೋಟ್ ಮಾಡಿಕೊಂಡು ಎರಡು ಪರ್ಸನಾಲಿಟಿಯನ್ನು ಕಟ್ಟಿಕೊಂಡು ಬರೆದ ಪತ್ರಗಳ ಸರಣಿ ಈ ಪುಸ್ತಕ. ಪುಸ್ತಕ ಬರೆಯುವ ಕಾಲ ನನಗಿಷ್ಟ. ಅದು ನನ್ನನ್ನು ಅತ್ಯಂತ ಡಿಸಿಪ್ಲಿನಾಗಿ ಇರಿಸುತ್ತದೆ. ಬೆಳಗ್ಗೆ ಎದ್ದು ಬರೆಯೋದು, ರಾತ್ರಿ ಅಚಾನಕ್ಕಾಗಿ ಎದ್ದು 10 ಪುಟ ಬರೆಯುವುದು, ಇಲ್ಲವೇ ಬರೆಯುವುದಕ್ಕೆ ಮಾಡುವ ಪೂರಕ ಓದು ನನ್ನ ಬುದ್ಧಿಯನ್ನು ಇನ್ನಷ್ಟು ಬೆಳೆಸಿತು ಎಂದರೆ ತಪ್ಪಲ್ಲ.’ ಎನ್ನುವ ಮೂಲಕ ತಾವು ಬದುಕಿನಲ್ಲಿ ಕಂಡ ಮತ್ತು ಬರೆಯಬೇಕು ಎನ್ನಿಸಿದ್ದೆಲ್ಲವನ್ನೂ ಬರೆದಿದ್ದಾಗಿ ಹೇಳಿದ್ದಾರೆ. ಪತ್ರರೂಪದ ಸರಣಿಯಲ್ಲಿ ಬರೆದು ಅದನ್ನು ಸಾಹಿತ್ಯಕ ಕೃತಿಯಾಗಿ ಪರಿವರ್ತಿಸಿದ ಪರಿ ಇಲ್ಲಿ ಪ್ರಶಂಸಾರ್ಹ.
©2025 Book Brahma Private Limited.