ಲೇಖಕಿ ವಿಜಯನಳಿನಿ ಅವರ ಸಂಪಾದನೆಯಲ್ಲಿ ಮೂಡಿಬಂದಿರುವ ಅಪೂರ್ವ ಕೃತಿ ಇದು. ತಂಗಿ ಸಾವಿತ್ರಮ್ಮನಿಂದ ಅಕ್ಕ ಮಾಂಕಾಳಮ್ಮನಿಗೆ ಪತ್ರಮಾಲೆಯೊಂದರ ಸರಣಿಗಳನ್ನು ದಾಖಲಿಸಿದ, 1930 ರಿಂದ 1990 ರವರೆಗಿನ ಕಥನಗಳನ್ನು ಪುಸ್ತಕ ಹೇಳುತ್ತದೆ. ತನ್ನ ಅಕ್ಕನೊಂದಿಗೆ ನಡೆಸಿದ ಏಕಮುಖಿ ಸಂವಾದ ಮಾತುಗಾರಿಕೆಯು ಪತ್ರಮಾಲೆಯ ಮುಖೇನ ಬರಹ ರೂಪ ತಾಳಿ, ಕಥನವಾಗಿ ತಂಗಿಯು ತಾನು ಕಂಡುಂಡ ಬವಣೆಯನ್ನು ಸರಿಸುಮಾರು ಅರವತ್ತರ ಆಸುಪಾಸಿನ ಹೊತ್ತಿಗೆ ಸ್ಮರಿಸಿ, ತನ್ನ ಅಕ್ಕನ ಕುರಿತು ತಾನು ತೋಡಿಕೊಳ್ಳುವ ಸ್ವಗತ ಲಹರಿ ಒಂದು ರೀತಿಯ ಸಂವಾದದ ಮೂಲಕ ನಡೆದ ನಿವೇದನೆ ಎಂದೇ ಹೇಳಬಹುದು. ಅಂದಿನ ದಿನಮಾನಗಳಿಂದ ಆರಂಭವಾದ ಈ ಕಥನವು ಸಾಗುತ್ತಾ ಸಾಗುತ್ತಾ ವ್ಯಕ್ತಿಗತ ಸ್ವಗತವಾಗದೇ ಎಲ್ಲರನ್ನೂ, ಎಲ್ಲವನ್ನೂ ನೆನೆಯುವ ಕಥನವಾಗಿ ರೂಪುಗೊಂಡಿದೆ.
©2024 Book Brahma Private Limited.