ಪತ್ರಾವಲಿ

Author : ಬಸವರಾಜ ಪಿ. ಡೋಣೂರ

Pages 373

₹ 250.00




Year of Publication: 2014
Published by: ರೋಹಿಣಿ ಎಂಟರ್ ಪ್ರೈಸಸ್
Address: ಬೆಂಗಳೂರು- 560091

Synopsys

‘ಪತ್ರಾವಲಿ’ ಜಿ.ಬಿ. ಸಜ್ಜನರು ಬಸವರಾದ ಡೋಣೂರರಿಗೆ 1997ರಿಂದ 2007ರ ಮಧ್ಯೆ ಬರೆದ ಪತ್ರಗಳ ಸಂಗ್ರಹ. ಇಬ್ಬರು ಸೂಕ್ಷ್ಮ ಸಂವೇದಿಗಳ ಮಧ್ಯೆ ನಡೆದಿರುವ ಪತ್ರವ್ಯವಹಾರ. ಪತ್ರಗಳ ಸಂಖ್ಯೆ ಮುನ್ನೂರು ಮೀರಿದ್ದು, ಇಷ್ಟು ದೀರ್ಘ ಕಾಲ ಪತ್ರಗಳ ವಿನಿಮಯ ಮಾಡಿರುವುದೊಂದು ಸಾಧನೆಯಾದರೆ, ಅವನ್ನು ಜತನವಾಗಿಟ್ಟುಕೊಂಡಿದ್ದು ಮತ್ತೊಂದು ಸಾಹಸ. ಅವುಗಳ ಮಹತ್ವದ ಅರಿವುಳ್ಳವರು ಮಾತ್ರ ಹಾಗೆ ಕಾಪಿಟ್ಟುಕೊಳ್ಳುವರು. ಈ ಪತ್ರವ್ಯವಹಾರ ಅವ್ಯಾಹತವಾಗಿ ನಡೆಸಿಕೊಂಡು ಬಂದಿರುವ ಡಾ. ಬಸವರಾಜ ಡೋಣೂರ ಹಾಗೂ ಅವರ ಗುರು ಡಾ.ಜಿ.ಬಿ. ಸಜ್ಜನ ಇಬ್ಬರೂ ಅಭಿನಂದನಾರ್ಹರು. ಪತ್ರಬರಹದ ಕಾಲ ಮುಗಿದೇ ಹೋಯಿತೆಂಬ ಸಂದರ್ಭದಲ್ಲಿ ’ಪತ್ರಾವಲಿ”ಯಲ್ಲಿರುವ ಪತ್ರಗಳು ಗಮನ ಸೆಳೆಯುತ್ತವೆ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books