ಸಿದ್ಧವನಹಳ್ಳಿ ಕೃಷ್ಣಶರ್ಮ ಅವರು ಗಾಂಧೀಜಿ ಅವರೊಂದಿಗೆ ವ್ಯವಹರಿಸಿದ ಪತ್ರಗಳ ಸಾಹಿತ್ಯದ ಕೃತಿ ಇದು-ಗಾಂಧೀಜಿಯವರ ರಾಜಕೀಯ ಪತ್ರಗಳು. 1947ರಲ್ಲಿ ಮೊದಲ ಮುದ್ರಣ ಕಂಡಿದೆ. ಈಗಿನದು ದ್ವಿತೀಯ ಮುದ್ರಣ. ಗಾಂಧೀಜಿ ಅವರ ರಾಜಕಾರಣವು ಗಹನವಾಗಿದೆ. ವೀರಚರಿತೆಯಾಗಿದೆ. ಅವರು ಭಾರತೀಯ ನೈಜ ಕ್ರಾಂತಿಕಾರರು. ಶತ್ರುವಿಗೆ ಮರ್ಮ ಆಘಾತವನ್ನುಂಟು ಮಾಡುವ ಅವರ ನಿಪುಣತೆ, ಅವರನ್ನು ಮೂದಲಿಸುವ ರೀತಿ ಜನರನ್ನು ಬೆರಗುಗೊಳಿಸುತ್ತದೆ. ನಿದ್ದೆಯಲ್ಲಿದ್ದ ಭಾರತವನ್ನು ಬಡಿದೆಬ್ಬಿಸಿದವರು. ಎಷ್ಟು ಅಧ್ಯಯನ ಮಾಡಿದರೂ ಇವರ ವ್ಯಕ್ತಿತ್ವ ಹಿಗ್ಗುತ್ತದೆ. ಒಬ್ಬ ನಾಯಕನಾಗಿ ಅವರು ದೇಶದ ಸ್ವಾತಂತ್ಯ್ರಕ್ಕಾಗಿ ವಿದೇಶಿಗಳಿಗೆ ಬರೆದ ಪತ್ರಗಳು, ತಾವು ಹಮ್ಮಿಕೊಂಡ ಚಳವಳಿಗಳ ಬಗ್ಗೆ, ಶಾಸನ ಉಲ್ಲಂಘಿಸುತ್ತಿರುವ ಬಗ್ಗೆ, ವಾಕ್ ಸ್ವಾತಂತ್ಯ್ರದ ಸತ್ಯಾಗ್ರಹ ಬಗ್ಗೆ ಅಸಂಖ್ಯ ಪತ್ರಗಳನ್ನು ಬರೆದಿದ್ದರು. ಅವುಗಳ ಸಂಗ್ರಹರೂಪವೇ ಈ ಕೃತಿ. ದೇಶದ ಸ್ವಾತಂತ್ಯ್ರ-ಹೋರಾಟ, ಬ್ರಿಟಿಷರ ಆಡಳಿತ, ಜಾಗತಿಕ ನೋಟ ಇತ್ಯಾದಿ ಅಂಶಗಳನ್ನು ಇಲ್ಲಿ ಕಾಣಬಹುದು.
©2024 Book Brahma Private Limited.