ಲೇಖಕ ನರೇಂದ್ರ ರೈ ದೇರ್ಲ ಅವರ ಕೃತಿ ಕರಾವಳಿ ಕರ್ನಾಟಕದ ಪತ್ರಸಾಹಿತ್ಯ. "ಪೆನ್ನಿನ ತುದಿಗೆ ಬೆಳಕು ಬಿದ್ದಾಗ ಅಕ್ಷರ- ಸಾಹಿತ್ಯ"- ಎಂದವರು ನಾಟಕಕಾರ ಶ್ರೀರಂಗರು. ಈಗ ಕಾಲ ಬದಲಾಗಿದೆ. ಬೆರಳಿನ ತುದಿಗೆ ಬೆಳಕು ಬಿದ್ದಾಗ ಮೊಬೈಲ್ನಲ್ಲಿ ಅಕ್ಷರ- ಸಾಹಿತ್ಯ ಸೃಷ್ಟಿಯಾಗುತ್ತಿದೆ .ಜಗತ್ತಿನ ಕೊನೆಯ ಪುಸ್ತಕ ,ಕಾಗದರಹಿತ ಪುಸ್ತಕ ಮಕ್ಕಳ ಕೈಯಲ್ಲಿದೆ . ಕೈಬರಹ, ಪತ್ರ ಇವೆಲ್ಲ ನಿಧಾನವಾಗಿ ಅಟ್ಟಕ್ಕೆ ಸೇರುತ್ತಿವೆ.ನೂರಾರು ವರ್ಷ ಕಾಗದ ಈ ಜಗತ್ತನ್ನ ಆಳಿತ್ತು .ಶಿಲೆ, ತಾಳೆಗರಿ, ತಾಮ್ರಪಟ, ಕಾಗದ ಎಲ್ಲವೂ ತೆರೆಗೆ ಸರಿದು ಯಂತ್ರದ ದಾರಿಯಲ್ಲಿ ಅರಿವು ಸಾಗುವ ದಿನಮಾನದಲ್ಲಿ ಕೈಬರಹ ಪತ್ರ ಸಾಹಿತ್ಯದ ಬಗ್ಗೆ ನಾನೊಂದು ಪುಟ್ಟ ಪುಸ್ತಕ ಬರೆದಿದ್ದೇನೆ. ಅದೇ' ಕರಾವಳಿ ಕರ್ನಾಟಕದ ಪತ್ರ ಸಾಹಿತ್ಯ'. ಪತ್ರಗಳು ಒಂದು ಕಾಲದ ಸತ್ಯ, ಮನೋಇಂಗಿತ. ಪತ್ರಗಳನ್ನು ಯಾರು ಯಾರಿಗೆ ಬರೆಯಲಿ ಅದಕ್ಕೊಂದು ಭಾಷೆ ಉದ್ದೇಶ ಪರಿಣಾಮ ಇದ್ದೇ ಇದ್ದೇ ಇರುತ್ತದೆ. ಕೈಬರಹ ಮನುಷ್ಯನ ಭಾವನೆ ಸಂವೇದನೆಗಳನ್ನು ಭಿನ್ನ-ಭಿನ್ನವಾಗಿ ಅಭಿವ್ಯಕ್ತಿಸುತ್ತದೆ. ಅದರ ಮುದ್ರಿತ ರೂಪ ಅಂತಹ ಸೂಕ್ಷ್ಮತೆಯನ್ನು ಕಳಚಿ ಏಕರೂಪ ಗೊಳಿಸುತ್ತದೆ. ಇಂಥ ಪತ್ರಗಳನ್ನು ಸಾಹಿತ್ಯ ಎಂದು ಪರಿಗಣಿಸಬೇಕೇ? ಕಳೆದು ಹೋದ ಪತ್ರಗಳು ಅವು ಹೊಂದಿರುವ ವಿಷಯ ಚರ್ಚೆ ವಾಗ್ವಾದಗಳಿಂದ ವರ್ತಮಾನಕ್ಕೆ ಏನು ಪ್ರಯೋಜನ? ಪತ್ರಗಳಲ್ಲಿರುವ ಸಾಹಿತ್ಯ ಸಾಂಸ್ಕೃತಿಕ ಮಾನವೀಯ ಮೌಲ್ಯಗಳೇನು? ಇವುಗಳನ್ನು ಈಗ ಪ್ರಕಟಿಸಿ ಇನ್ಯಾರೋ ಓದುವುದರಿಂದ ಅವುಗಳ ನಿರ್ಧರಿತ ಖಾಸಗಿತನಗಳು ಬಹಿರಂಗವಾಗುವುದಿಲ್ಲವೇ? ಬರೆದವರು- ಪಡೆದವನು ಇಲ್ಲವ ಎಂಬ ಮಾತುಗಳು ಈ ಕೃತಿಯಲ್ಲಿದೆ.
©2024 Book Brahma Private Limited.