ತಮ್ಮ ಆಪ್ತ ಗೆಳೆಯರಾದ ಎಚ್.ವೈ. ಶಾರದಾ ಪ್ರಸಾದ (ನ್ಯಾಷನಲ್ ಸ್ಟ್ಯಾಂಡರ್ಡ್ ಪತ್ರಿಕೆಯ ಸುದ್ದಿ ವಿಭಾಗದ ಸಂಪಾದಕರು) ಹಾಗೂ ಟಿ.ಎಸ್. ಸಂಜೀವಕುಮಾರ (ಭಾರತ್ ಪತ್ರಿಕೆಯಲ್ಲಿ ಉಪಸಂಪಾದಕರು) ಇವರಿಬ್ಬರೂ ಮುಂಬೈನಲ್ಲಿದ್ದರು.
ಲೇಖಕ ಕೃಷ್ಣಮೂರ್ತಿ ನಾಡಿಗ ಅವರು ಅಮೆರಿಕೆಯಲ್ಲಿದ್ದಾಗ ಈ ಗೆಳೆಯರಿಗೆ ಬರೆದ ಪತ್ರಗಳೇ ‘ನಮ್ಮ ಕಾಗದಗಳು’. ಹಿರಿಯ ಸಾಹಿತಿ ಡಿ.ವಿ.ಜಿ ಕೃತಿಗೆ ಮುನ್ನುಡಿ ಬರೆದು ‘ಹರಟೆಯ ಶೈಲಿ ಒಳ್ಳೆಯ ಸ್ನೇಹ ಪತ್ರದ ಲಕ್ಷಣ. ಅದು ಒಂದು ಘನ ವಿಚಾರದ ಅಂತರಂಗವನ್ನು ಒಂದು ಲಘು ಟೀಕೆಯಿಂದ ಹೊರಪಡಿಸುವ ಸೊಗಸು. ಕನ್ನಡದಲ್ಲಿ ಇಂತಹ ಸಾಹಿತ್ಯ ಬೆಳೆಯಬೇಕಿದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.